ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಹೋರಾಟದಿಂದ EPFO ಹಿಂಪಡೆಯುವಿಕೆ ನಿಯಮಗಳಲ್ಲಿ ಬದಲಾವಣೆ: ತೇಜಸ್ವಿ ಸೂರ್ಯ
- by Suddi Loka
- November 20, 2026
- 11 Views
ಬೆಂಗಳೂರು: ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಬೇಡಿಕೆಗಳ ಹಿನ್ನೆಲೆಯಲ್ಲಿ EPFO ಹಿಂಪಡೆಯುವಿಕೆ ನಿಯಮಗಳಲ್ಲಿ ಮೂರು ಪ್ರಮುಖ ಸುಧಾರಣೆಗಳನ್ನು ತರಲಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ನವೆಂಬರ್ 19ರಂದು ನಡೆದ EPFO ಕೇಂದ್ರೀಯ ಟ್ರಸ್ಟಿಗಳ ಮಂಡಳಿ ಸಭೆಯಲ್ಲಿ ಈ ಬದಲಾವಣೆಗಳಿಗೆ ಅನುಮೋದನೆ ನೀಡಲಾಗಿದೆ. ಸೆಪ್ಟೆಂಬರ್ 20ರಂದು ಸುಮಾರು 50 ಗಾರ್ಮೆಂಟ್ ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಸಂಸದರ ಗಮನಕ್ಕೆ ತಂದಿದ್ದರು. ಬಳಿಕ ಶಾಸಕ ಎಂ. ಸತೀಶ್ ರೆಡ್ಡಿ ಅವರೊಂದಿಗೆ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.

ಕಾರ್ಮಿಕರ ಬೇಡಿಕೆಗಳ ಪರಿಶೀಲನೆಗಾಗಿ ಅಕ್ಟೋಬರ್ 6ರಂದು ಅಧಿಕಾರಿಗಳ ತಂಡ ಬೊಮ್ಮನಹಳ್ಳಿಯ ಗಾರ್ಮೆಂಟ್ ಕಾರ್ಖಾನೆಗಳಿಗೆ ಭೇಟಿ ನೀಡಿತ್ತು.
ಹೊಸ ಸುಧಾರಣೆಗಳ ಪ್ರಕಾರ, ಕನಿಷ್ಠ ಪಿಎಫ್ ಬ್ಯಾಲೆನ್ಸ್ ಮಿತಿಯನ್ನು ಶೇ.25ರಿಂದ ಶೇ.10ಕ್ಕೆ ಇಳಿಸಲಾಗಿದೆ. ನಿರುದ್ಯೋಗದ ಬಳಿಕ ಅಂತಿಮ ಇತ್ಯರ್ಥಕ್ಕೆ ಕಾಯುವ ಅವಧಿಯನ್ನು 12 ತಿಂಗಳಿಂದ ಎರಡು ತಿಂಗಳಿಗೆ ಕಡಿತಗೊಳಿಸಲಾಗಿದೆ. ನಿವೃತ್ತರು ತಮ್ಮ ಉಳಿತಾಯ ಉಳಿಸಿಕೊಂಡು ಕಂತುಗಳಲ್ಲಿ ಹಣ ಪಡೆಯಲು ವ್ಯವಸ್ಥಿತ ಹಿಂಪಡೆಯುವಿಕೆ ಯೋಜನೆಯನ್ನೂ ಪರಿಚಯಿಸಲಾಗಿದೆ.
ಈ ಕ್ರಮಗಳು ದೇಶಾದ್ಯಂತ EPFO ಸದಸ್ಯರಿಗೆ ಅನುಕೂಲವಾಗಲಿವೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.


Comments (0)