ಬರಾಕ್ ಕ್ಷಿಪಣಿ ರಕ್ಷಣಾ ವ್ಯವಸ್ಥೆ ನವೀಕರಣಕ್ಕೆ ಇಸ್ರೇಲ್ ಜೊತೆ ₹1,976 ಕೋಟಿ ಒಪ್ಪಂದ
- by Suddi Loka
- November 19, 2026
- 4 Views
ನವದೆಹಲಿ: ಭಾರತೀಯ ನೌಕಾಪಡೆಯ ಹಡಗುಗಳಲ್ಲಿ ನಿಯೋಜಿಸಿರುವ ಬರಾಕ್ ಪಾಯಿಂಟ್ ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ನವೀಕರಿಸಲು ರಕ್ಷಣಾ ಸಚಿವಾಲಯವು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (IAI) ಜೊತೆ ₹1,976.40 ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.
ನವೆಂಬರ್ 18, 2026ರಂದು ನವದೆಹಲಿಯಲ್ಲಿ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರ ಸಮ್ಮುಖದಲ್ಲಿ ಇತರ ಬಂಡವಾಳ ಖರೀದಿ ಕಾರ್ಯವಿಧಾನದಡಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಯೋಜನೆಯಡಿ ಕ್ಷಿಪಣಿ ವ್ಯವಸ್ಥೆಯ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ಗಳನ್ನು ಸಮಗ್ರವಾಗಿ ನವೀಕರಿಸಲಾಗುವುದು. ಇದರಿಂದ ವ್ಯವಸ್ಥೆಯ ಕಾರ್ಯಕ್ಷಮತೆ ಹೆಚ್ಚುವುದರ ಜತೆಗೆ ಭಾರತೀಯ ನೌಕಾಪಡೆಯ ಹಡಗುಗಳ ವಾಯು ರಕ್ಷಣಾ ಸಾಮರ್ಥ್ಯ ಮತ್ತಷ್ಟು ಬಲಗೊಳ್ಳಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.


Comments (0)