2035ರ ವೇಳೆಗೆ ಇಸ್ಲಾಂ ವಿಶ್ವದ ಅತಿದೊಡ್ಡ ಧರ್ಮವಾಗುವ ಸಾಧ್ಯತೆ: ಪ್ಯೂ ವರದಿ
- by Suddi Loka
- November 19, 2026
- 7 Views
2035ರ ವೇಳೆಗೆ ಇಸ್ಲಾಂ ಧರ್ಮವು ಕ್ರೈಸ್ತ ಧರ್ಮವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಧಾರ್ಮಿಕ ಗುಂಪಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಪ್ಯೂ ಸಂಶೋಧನಾ ಕೇಂದ್ರದ ವರದಿ ಅಂದಾಜಿಸಿದೆ.
2020ರಲ್ಲಿ ಸುಮಾರು 202 ಕೋಟಿ ಇದ್ದ ಮುಸ್ಲಿಂ ಜನಸಂಖ್ಯೆ 2070ರ ವೇಳೆಗೆ 364 ಕೋಟಿಗೆ ಏರಬಹುದು. ಇದು ಶೇ.80ರಷ್ಟು ಬೆಳವಣಿಗೆಯಾಗಲಿದೆ. ಇದೇ ಅವಧಿಯಲ್ಲಿ ಕ್ರೈಸ್ತರ ಸಂಖ್ಯೆ 227 ಕೋಟಿಯಿಂದ 296 ಕೋಟಿಗೆ ಹೆಚ್ಚಾಗುವ ನಿರೀಕ್ಷೆಯಿದೆ.
2020ರಲ್ಲಿ ಸುಮಾರು 118 ಕೋಟಿ ಇದ್ದ ಹಿಂದೂಗಳ ಸಂಖ್ಯೆ 2070ರ ವೇಳೆಗೆ 138ರಿಂದ 140 ಕೋಟಿ ತಲುಪಬಹುದು. ಆದರೆ ಜಾಗತಿಕ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಶೇ.14.9ರಿಂದ ಶೇ.13.6ಕ್ಕೆ ಇಳಿಯುವ ಸಾಧ್ಯತೆಯಿದೆ.

ಭಾರತದಲ್ಲಿ ಹಿಂದೂಗಳ ಜನಸಂಖ್ಯಾ ಪಾಲು 2020ರಲ್ಲಿದ್ದ ಶೇ.79.4ರಿಂದ 2070ರ ವೇಳೆಗೆ ಶೇ.75.8ಕ್ಕೆ ಇಳಿಯಬಹುದು. ಇದೇ ಅವಧಿಯಲ್ಲಿ ಮುಸ್ಲಿಮರ ಪಾಲು ಶೇ.15.2ರಿಂದ ಶೇ.19.6ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.
ಆದರೂ 2070ರ ವೇಳೆಯೂ ಹಿಂದೂಗಳೇ ಭಾರತದಲ್ಲಿ ಅತಿ ದೊಡ್ಡ ಧಾರ್ಮಿಕ ಗುಂಪಾಗಿ ಮುಂದುವರಿಯಲಿದ್ದು, ದೇಶದ ಜನಸಂಖ್ಯೆಯ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಪಾಲು ಹೊಂದಿರಲಿದ್ದಾರೆ ಎಂದು ವರದಿ ತಿಳಿಸಿದೆ.


Comments (0)