ಯೆಮೆನ್‌ನ ಲಾಜ್‌ನಲ್ಲಿ ಪ್ರಯಾಣಿಕ ವಾಹನಗಳ ಮೇಲೆ ದಾಳಿ; ಆರು ಮಂದಿ ಸಾವು

ಲಾಜ್: ಯೆಮೆನ್‌ನ ದಕ್ಷಿಣ ಪ್ರಾಂತ್ಯ ಲಾಜ್‌ನ ಮಾಬಕ್ ಪ್ರದೇಶದಲ್ಲಿ ಸೋಮವಾರ ಪ್ರಯಾಣಿಕ ವಾಹನಗಳ ಮೇಲೆ ನಡೆದ ಶೆಲ್ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ನಾಲ್ಕು ವಾಹನಗಳು ಸಂಪೂರ್ಣ ನಾಶವಾಗಿವೆ.

ಪ್ರಯಾಣಿಕ ಬಸ್‌ಗಳು ಮತ್ತು ಸರಕು ಸಾಗಣೆ ಟ್ರಕ್‌ಗಳು ಸಂಚರಿಸುತ್ತಿದ್ದ ಹೆದ್ದಾರಿಯಲ್ಲಿ ದಾಳಿ ನಡೆದಿದೆ. ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಯೆಮೆನ್ ಸರ್ಕಾರದ ಅಧಿಕಾರಿಗಳು ಹೌತಿ ಬಂಡುಕೋರರೇ ದಾಳಿಗೆ ಕಾರಣ ಎಂದು ಆರೋಪಿಸಿ, ಇದನ್ನು ಯುದ್ಧ ಅಪರಾಧ ಎಂದು ಖಂಡಿಸಿದ್ದಾರೆ.

ಆದರೆ, ಹೌತಿ ಸೇನಾ ವಕ್ತಾರ ಯಾಹ್ಯಾ ಸರೀ, ಸೌದಿ ಯುದ್ಧವಿಮಾನಗಳು ಎಂಟು ಬಾರಿ ವೈಮಾನಿಕ ದಾಳಿ ನಡೆಸಿವೆ ಎಂದು ಆರೋಪಿಸಿ ಪ್ರತೀಕಾರದ ಎಚ್ಚರಿಕೆ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

Related Articles

Comments (0)