ಶ್ರೀದೇವಿ ಪುತ್ರಿ ಚಿತ್ರದ ಟ್ರೈಲರ್ ಬಿಡುಗಡೆ!
- by Suddi Team
- June 12, 2018
- 43 Views
ಮುಂಬಯಿ: ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಹಾಗೂ ರಾಜೇಶ್ ಕತ್ತರ್ ಪುತ್ರ ಈಶಾನ್ ಕತ್ತರ್ ಅಭಿನಯಿಸಿರುವ ‘ದಡಕ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಧರ್ಮ ಪ್ರೊಡಕ್ಷನ್ ಅಡಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಟ್ರೇಲರ್ನಲ್ಲಿ ಜಾನ್ಹವಿ ಹಾಗೂ ಈಶಾನ್ ರೊಮಾನ್ಸ್ ಜೋರಾಗಿದೆ.
ಮರಾಠಿಯ ಸೂಪರ್ ಹಿಟ್ ಚಿತ್ರ ‘ಸೈರಾಟ್’ನ ರಿಮೇಕ್ ಆಗಿರುವ ದಡಕ್ ಚಿತ್ರದಲ್ಲಿ ಜಾನ್ಹವಿ ಹಾಗೂ ಈಶಾನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಈ ಸಿನಿಮಾದ ನಿರ್ಮಾಪಕರು ಜಾನ್ಹವಿ ಹಾಗೂ ಈಶಾನ್ಗಾಗಿ ಒಂದು ಸಂದೇಶ ಬರೆದಿದ್ದರು. ಅದು ಈ ಹೊಸ ವರ್ಷದಲ್ಲಿ ಹೊಸ ಸಂಬಂಧದ ಆರಂಭ ಎಂದು ಬರೆಯಲಾಗಿತ್ತು.
ಜಾನ್ಹವಿ ಅಣ್ಣ ಅರ್ಜುನ್ ಕಪೂರ್ ಈ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಇಸ್ಟಾಗ್ರಾಮ್ನಲ್ಲಿ ಕ್ಷಮೆ ಕೇಳಿದ್ದಾರೆ.
Related Articles
Thank you for your comment. It is awaiting moderation.
Comments (0)