ಕೆಎಸ್‌ಆರ್‌ಟಿಸಿ ಅಂತರ ನಿಗಮ ವರ್ಗಾವಣೆ: ನೌಕರರ ಆದೇಶ ಪಟ್ಟಿ ಪ್ರಕಟ, ಜೂನ್ 11 ರಿಂದ ಆನ್‌ಲೈನ್ ಕೌನ್ಸಲಿಂಗ್ ಆರಂಭ
- by Suddi Team
- June 4, 2026
- 134 Views
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ದರ್ಜೆ-3 (ಮೇಲ್ವಿಚಾರಕೇತರ) ಮತ್ತು ದರ್ಜೆ-4 ರ ನೌಕರರ 2026 ನೇ ಸಾಲಿನ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆಯ ಪ್ರಮುಖ ಆದೇಶ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ಅರ್ಹ ನೌಕರರ ಪರಸ್ಪರ (Mutual) ಮತ್ತು ಸಾಮಾನ್ಯ ವರ್ಗಾವಣೆ (ಪತಿ-ಪತ್ನಿ ಪ್ರಕರಣಗಳು, ಶೇ. 40 ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವವರು ಹಾಗೂ ತೀವ್ರ ಅನಾರೋಗ್ಯ ಪೀಡಿತರು) ಆದೇಶಗಳನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ.
ಜೂನ್ 8 ರಂದು ಬಿಡುಗಡೆ, ಜೂನ್ 11 ರಿಂದ ಕೌನ್ಸಲಿಂಗ್:
ಪರಸ್ಪರ ವರ್ಗಾವಣೆಗೊಂಡಿರುವ ಎಲ್ಲಾ ನೌಕರರನ್ನು ಮುಂಬರುವ ಜೂನ್ 8, 2026 ರಂದು ವರ್ಗಾವಣೆಗೊಂಡ ಹೊಸ ವಿಭಾಗಗಳಿಗೆ ಪ್ರಭಾವಕಾರಿಯಾಗಿ ಬಿಡುಗಡೆಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಇನ್ನು ಸಾಮಾನ್ಯ ವರ್ಗಾವಣೆಗೆ ಆಯ್ಕೆಯಾಗಿರುವ ನೌಕರರಿಗೆ ಕೌನ್ಸಲಿಂಗ್ ಮೂಲಕ ಕಚೇರಿ ಅಥವಾ ಘಟಕಗಳನ್ನು ಹಂಚಿಕೆ ಮಾಡಲಾಗುತ್ತದೆ. ಈ ಕೌನ್ಸಲಿಂಗ್ ಪ್ರಕ್ರಿಯೆಯು ಜೂನ್ 11, 2026 ರಿಂದ ಜೂನ್ 17, 2026 ರ ಅವಧಿಯಲ್ಲಿ ಜರುಗಲಿದೆ.
ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್:
ವರ್ಗಾವಣೆ ಮತ್ತು ಕೌನ್ಸಲಿಂಗ್ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ನಡೆಯಲಿದ್ದು, ನೌಕರರು ಒಮ್ಮೆ ಆನ್‌ಲೈನ್‌ನಲ್ಲಿ ಆದ್ಯತೆ (Preference) ಸಲ್ಲಿಸಿದ ನಂತರ ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ. ಯಾವುದೇ ರೀತಿಯ ಲಿಖಿತ ಅಥವಾ ಭೌತಿಕ ಅರ್ಜಿಗಳ ಆಧಾರದ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಕರಾರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಯುತ ಸಮಿತಿಯ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
Related Articles
Thank you for your comment. It is awaiting moderation.


Comments (0)