ಬೆಂಗಳೂರು-ಬೀದರ್, ನಾರಂಗಿ-ಮಾಲ್ಡಾ ಟೌನ್ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

ಹುಬ್ಬಳ್ಳಿ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೇಯು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೀದರ್, ನಾರಂಗಿ ಹಾಗೂ ಮಾಲ್ಡಾ ಟೌನ್ ನಡುವೆ ಈ ಹಿಂದೆ ಚಲಿಸುತ್ತಿದ್ದ ವಿಶೇಷ ರೈಲು ಸೇವೆಗಳನ್ನು ಈಗಿರುವ ಸಮಯ, ನಿಲುಗಡೆಗಳು ಮತ್ತು ಬೋಗಿಗಳ ಸಂಯೋಜನೆಯೊಂದಿಗೆ ಮುಂದುವರಿಸಲು ನಿರ್ಧರಿಸಿದೆ.

ಎಸ್ಎಂವಿಟಿ ಬೆಂಗಳೂರು – ಬೀದರ್ – ಎಸ್ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ:

1. ರೈಲು ಸಂಖ್ಯೆ 06539 ಎಸ್ಎಂವಿಟಿ ಬೆಂಗಳೂರು – ಬೀದರ್ ಎಕ್ಸ್ ಪ್ರೆಸ್ ವಿಶೇಷ ರೈಲು ಶುಕ್ರವಾರ ಮತ್ತು ಭಾನುವಾರಗಳಂದು ಮುಂದುವರಿಯಲಿದೆ. ಈ ಹಿಂದೆ 2025ರ ಜೂನ್ 29ರವರೆಗೆ ಕಾರ್ಯನಿರ್ವಹಿಸಲು ತಿಳಿಸಲಾಗಿತ್ತು, ಈಗ ಈ ಸೇವೆಯನ್ನು ಜುಲೈ 4ರಿಂದ ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ.

2. ರೈಲು ಸಂಖ್ಯೆ 06540 ಬೀದರ್ – ಎಸ್ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ ರೈಲು ಶನಿವಾರ ಮತ್ತು ಸೋಮವಾರಗಳಂದು ಮುಂದುವರಿಯಲಿದೆ. ಈ ಹಿಂದೆ 2025ರ ಜೂನ್ 30ರವರೆಗೆ ಕಾರ್ಯನಿರ್ವಹಿಸಲು ತಿಳಿಸಲಾಗಿತ್ತು, ಈಗ ಈ ಸೇವೆಯನ್ನು ಜುಲೈ 5ರಿಂದ ಸೆಪ್ಟೆಂಬರ್ 1ರವರೆಗೆ ವಿಸ್ತರಿಸಲಾಗಿದೆ.

ವಿಸ್ತರಿಸಿದ ಅವಧಿಯಲ್ಲಿ ಈ ರೈಲುಗಳು ಪ್ರತಿ ದಿಕ್ಕಿನಲ್ಲಿ 18 ಟ್ರಿಪ್ ಸಂಚರಿಸಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಎಸ್ಎಂವಿಟಿ ಬೆಂಗಳೂರು – ನಾರಂಗಿ – ಎಸ್ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ:

1. ರೈಲು ಸಂಖ್ಯೆ 06559 ಎಸ್ಎಂವಿಟಿ ಬೆಂಗಳೂರು – ನಾರಂಗಿ ಎಕ್ಸ್ ಪ್ರೆಸ್ ವಿಶೇಷ ರೈಲು ಮಂಗಳವಾರಗಳಂದು ಸಂಚಾರ ಮುಂದುವರಿಸಲಿದೆ, ಈ ಹಿಂದೆ 2025ರ ಜೂನ್ 10ರವರೆಗೆ ಸಂಚಾರ ನಡೆಸುವುದಾಗಿ ತಿಳಿಸಲಾಗಿತ್ತು, ಆದರೆ, ಈಗ ಜುಲೈ 7 ಮತ್ತು ಜುಲೈ 15ರಂದು ಸಂಚರಿಸಲಿದೆ.

2. ರೈಲು ಸಂಖ್ಯೆ 06560 ನಾರಂಗಿ – ಎಸ್ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ ರೈಲು ಶನಿವಾರದಂದು ಸಂಚಾರ ಮುಂದುವರಿಸಲಿದೆ, ಈ ಹಿಂದೆ 2025ರ ಜೂನ್ 14 ರವರೆಗೆ ತಿಳಿಸಲಾಗಿತ್ತು, ಆದರೆ, ಈಗ ಜುಲೈ 12 ಮತ್ತು 19 ರಂದು ಸಂಚಾರ ಮುಂದುವರಿಸಲಿದೆ.

ರೈಲು ಸಂಖ್ಯೆ 06559/06560 ವಿಸ್ತರಿಸಿದ ಅವಧಿಯಲ್ಲಿ ಪ್ರತಿ ದಿಕ್ಕಿನಲ್ಲಿ 2 ಟ್ರಿಪ್ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಎಸ್ಎಂವಿಟಿ ಬೆಂಗಳೂರು – ಮಾಲ್ಡಾ ಟೌನ್ – ಎಸ್ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ:

1. ರೈಲು ಸಂಖ್ಯೆ 06565 ಎಸ್ಎಂವಿಟಿ ಬೆಂಗಳೂರು – ಮಾಲ್ಡಾ ಟೌನ್ ಎಕ್ಸ್ ಪ್ರೆಸ್ ವಿಶೇಷ, ಈ ಹಿಂದೆ 2025ರ ಜೂನ್ 15 ರವರೆಗೆ ತಿಳಿಸಲಾಗಿತ್ತು. ಈಗ ಭಾನುವಾರ, ಜುಲೈ 13ರಂದು ಸಂಚರಿಸಲಿವೆ.

2. ರೈಲು ಸಂಖ್ಯೆ 06566 ಮಾಲ್ಡಾ ಟೌನ್ – ಎಸ್ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ, ಈ ಹಿಂದೆ ಜೂನ್ 18 ರವರೆಗೆ ತಿಳಿಸಲಾಗಿತ್ತು. ಈಗ ಬುಧವಾರ, ಜುಲೈ 16ರಂದು ಸಂಚರಿಸಲಿದೆ.

ರೈಲು ಸಂಖ್ಯೆ 06565/06566 ವಿಸ್ತರಿಸಿದ ಅವಧಿಯಲ್ಲಿ ಪ್ರತಿ ದಿಕ್ಕಿನಲ್ಲಿ 1 ಟ್ರಿಪ್ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

Related Articles

Comments (0)

Leave a Comment