ರಂಭಾಪುರಿ ಜಗದ್ಗುರುಗಳ ಅಕ್ಟೋಬರ್ ತಿಂಗಳ ಪ್ರವಾಸ ಪಟ್ಟಿ ಪ್ರಕಟ: ಜಮಖಂಡಿಯಲ್ಲಿ ದಸರಾ ದರ್ಬಾರ್ ಮಹೋತ್ಸವ
- by Suddi Team
- October 1, 2026
- 64 Views
ಬಾಳೆಹೊನ್ನೂರು: ಬಾಳೆಹೊನ್ನೂರಿನ ಶ್ರೀ ಜಗದ್ಗುರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳ 2026ರ ಅಕ್ಟೋಬರ್ ಮಾಹೆಯ ಅಧಿಕೃತ ಪ್ರವಾಸದ ವಿವರಗಳು ಪ್ರಕಟಗೊಂಡಿವೆ.
ಪ್ರವಾಸದ ಪ್ರಮುಖ ದಿನಾಂಕಗಳು ಮತ್ತು ಕಾರ್ಯಕ್ರಮಗಳ ವಿವರ:
ಅಕ್ಟೋಬರ್ 2: ರೋಣದಲ್ಲಿ ಗುರುಕುಲದ ಪ್ರಾರಂಭೋತ್ಸವ ಸಮಾರಂಭದಲ್ಲಿ ಶ್ರೀಗಳು ಭಾಗಿಯಾಗಲಿದ್ದಾರೆ.
ಅಕ್ಟೋಬರ್ 3: ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಲಿಂಗೈಕ್ಯ ಸೋಮಶೇಖರ ಶ್ರೀಗಳ ಪುಣ್ಯ ಸ್ಮರಣೋತ್ಸವ.
ಅಕ್ಟೋಬರ್ 5: ಯಲಬುರ್ಗಾ ತಾಲೂಕಿನ ಕಲ್ಕೂರು ಗ್ರಾಮದಲ್ಲಿ ಹಿರೇಮಠದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಧರ್ಮ ಸಮಾರಂಭ.
ಅಕ್ಟೋಬರ್ 7: ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಲಿದ್ದಾರೆ.
ಅಕ್ಟೋಬರ್ 9 ಮತ್ತು 10: ಅಕ್ಟೋಬರ್ 9ರಂದು ರಂಭಾಪುರಿ ಪೀಠದಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿರುವ ಶ್ರೀಗಳು, ಅಕ್ಟೋಬರ್ 10ರಂದು ಹುಬ್ಬಳ್ಳಿಯಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ದಸರಾ ಸಮಾರಂಭಕ್ಕೆ ತೆರಳಲಿದ್ದಾರೆ.
ಅಕ್ಟೋಬರ್ 11 ರಿಂದ 21 (ಶರನ್ನವರಾತ್ರಿ ದಸರಾ): ಜಮಖಂಡಿ ನಗರದಲ್ಲಿ ಶ್ರೀಗಳ ನೇತೃತ್ವದಲ್ಲಿ ಅತ್ಯಂತ ವೈಭವದ 35ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಜರುಗಲಿದೆ.
ಅಕ್ಟೋಬರ್ 25: ಬೆಂಗಳೂರಿನ ವರ್ತೂರಿನಲ್ಲಿ ನೂತನ ಕಾಲೇಜು ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಕ್ಟೋಬರ್ 26: ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದಲ್ಲಿ ವಾಸ್ತವ್ಯ ಮಾಡಿ ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡಲಿದ್ದಾರೆ.
ಅಕ್ಟೋಬರ್ 27: ಶಿಕಾರಿಪುರ ತಾಲೂಕಿನ ದಿಂಡದಹಳ್ಳಿಯಲ್ಲಿ ಲಿಂಗೈಕ್ಯ ಶಿವಾನಂದ ಶ್ರೀಗಳ 24ನೇ ವರ್ಷದ ಪುಣ್ಯ ಸ್ಮರಣೋತ್ಸವ.
ಅಕ್ಟೋಬರ್ 28: ಲಕ್ಷ್ಮೇಶ್ವರ ತಾಲೂಕಿನ ಮುಕ್ತಿಮಂದಿರ ಕ್ಷೇತ್ರದಲ್ಲಿ ಲಿಂಗೈಕ್ಯ ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ.
ಅಕ್ಟೋಬರ್ 30: ರಬಕವಿ ಬನಹಟ್ಟಿ ತಾಲೂಕಿನ ಗೋಲಭಾವಿಯಲ್ಲಿ ಮಠದ ಚನ್ನಬಸಯ್ಯ-ರಾಚಮ್ಮ ದಂಪತಿಗಳ ಶತಮಾನೋತ್ಸವ ಸಮಾರಂಭ.
ಅಕ್ಟೋಬರ್ 31: ಜೇವರ್ಗಿ ತಾಲೂಕಿನ ಶಹಾಪುರ ತಪೋವನಮಠದಲ್ಲಿ ಲಿಂಗೈಕ್ಯ ಶ್ರೀ ಸಿದ್ಧರಾಮೇಶ್ವರ ಶ್ರೀಗಳ 76ನೇ ವರ್ಷದ ಪುಣ್ಯ ಸ್ಮರಣೋತ್ಸವದ ಸಾನ್ನಿಧ್ಯ ವಹಿಸಲಿದ್ದಾರೆ.
ರಂಭಾಪುರಿ ಜಗದ್ಗುರುಗಳು ಹಮ್ಮಿಕೊಂಡಿರುವ ಈ ಎಲ್ಲಾ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳ ಸದುಪಯೋಗವನ್ನು ಸಮಸ್ತ ಧರ್ಮಾಭಿಮಾನಿಗಳು ಮತ್ತು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ಪೀಠದ ಪ್ರಕಟಣೆ ಕೋರಿದೆ.
Related Articles
Thank you for your comment. It is awaiting moderation.


Comments (0)