ಹೆಚ್ಡಿಕೆ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್
- by Suddi Team
- June 22, 2018
- 999 Views
ಬೆಂಗಳೂರು: ಜೆಡಿಎಸ್,ಕಾಂಗ್ರೆಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್ ಆಯ್ತು.ರೇವಣ್ಣ ಫಿಕ್ಸ್ ಮಾಡಿದ್ ಟೈಮ್ ನಲ್ಲಿ ಬಜೆಟ್ ಮಂಡಿಸೋಕೆ ಕುಮಾರಸ್ವಾಮಿ ಓಕೆ ಅಂದ್ರು.
ಜುಲೈ 2 ರಂದು ವಿಧಾನಸಭೆ ಜಂಟಿ ಅಧಿವೇಶನ ನಡೆಸಲು ಮುಖ್ಯಮಂತ್ರಿ ಹೆಚ್ಡಿಕೆ ನೇತೃತ್ವದ ಸಚಿವ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡ್ತು. ಮೊದಲ ದಿನ ರಾಜ್ಯಪಾಲ ವಜುಭಾಯ್ ವಾಲಾ ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದ್ರೆ ಜುಲೈ5 ಕ್ಕೆ ಹೆಚ್ಡಿಕೆ ತಮ್ಮ ಮೊದಲ ಬಜೆಟ್ ಮಂಡನೆ ಮಾಡಲಿದ್ದು, ಜುಲೈ12 ರವರೆಗೂ ಅಧಿವೇಶನ ನಡೆಯುತ್ತೆ.
ಅಧಿವೇಶನಕ್ಕೂ ಸಚಿವ ರೇವಣ್ಣ ಸಮಯ ನಿಗದಿಪಡಿಸಿದ್ರು.
ಜುಲೈ 2 ರಂದು ಮಧ್ಯಾಹ್ನ 12:30ಕ್ಕೆ ಸರಿಯಾಗಿಯೇ ರಾಜ್ಯಪಾಲರು ಭಾಷಣ ಆರಂಭಿಸಬೇಕು. ಜುಲೈ 5 ರಂದು ಬೆಳಗ್ಗೆ 11:30ಕ್ಕೆ ಸರಿಯಾಗಿ ಬಜೆಟ್ ಮಂಡನೆ ಮಾಡಬೇಕು ಎಂದು ಸಂಪುಟ ಸಭೆಯಲ್ಲಿ ರೇವಣ್ಣ ಹೇಳಿದ್ರು,ಇದಕ್ಕೆ ಸಿಎಂ ಹೆಚ್ಡಿಕೆ ಓಕೆ ಅಂದ್ರು.
ಸಂಪುಟ ಸಭೆ ಹೈಲೈಟ್ಸ್:
- ಬಸವರಾಜ ಹೊರಟ್ಟಿ ಹಂಗಾಮಿ ಸಭಾಪತಿಯಾಗಿ ನೇಮಕಕ್ಕೆ ಅನುಮೋದನೆ.
- ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ವಿಮಾ ಕಂತುಗಳ ಪಾವತಿಗೆ ರಾಜ್ಯ ಸರ್ಕಾರದ ಪಾಲು 655 ಕೋಟಿ ಬಿಡುಗಡೆಗೆ ಸಮ್ಮತಿ.
- ವರ್ಗಾವಣೆ ನೀತಿ ಜಾರಿಗೆ ಒಪ್ಪಿಗೆ.
ಜುಲೈ ಅಂತ್ಯದೊಳಗಾಗಿ ಒಟ್ಟು ನೌಕರರ ಶೇ.4ರಷ್ಟನ್ನು ಮೀರದಂತೆ ಸಾರ್ವತ್ರಿಕ ವರ್ಗಾವಣೆ. - ಉನ್ನತ ಶಿಕ್ಷಣ ಗುಣಮಟ್ಟ ಸುಧಾರಣಾ ಅಭಿಯಾನಕ್ಕೆ ರಾಜ್ಯದ ಪಾಲು 460 ಕೋಟಿ ರೂ.ಬಿಡುಗಡೆ.
- ವಿಮಾನ ನಿಲ್ದಾಣ ಪ್ರಾಧಿಕಾರದ 333 ಕೋಟಿ ರೂ.ಸಾಲ ಮರುಪಾವತಿ ಅವಧಿ 10 ವರ್ಷ ಮುಂದೂಡಿಕೆ.
- ಚನ್ನರಾಯಪಟ್ಟಣ ತಾಲೂಕಿನ 27 ಕೆರೆ ತುಂಬಿಸುವ ಯೋಜನೆಗೆ ಒಪ್ಪಿಗೆ.
- ಭಾರತ ರತ್ನ ಮತ್ತು ಪದ್ಮ ಪ್ರಶಸ್ತಿಗಳಿಗೆ ಹೆಸರು ಶಿಫಾರಸ್ಸು ಮಾಡಲು ಸಿಎಂ ಗೆ ಅಧಿಕಾರ.
Related Articles
Thank you for your comment. It is awaiting moderation.
Comments (0)