ಪೊಲೀಸ್ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಕರ್ನಾಟಕದಲ್ಲಿ 7,925 ಪೊಲೀಸ್ ಹುದ್ದೆಗಳ ಭರ್ಜರಿ ನೇಮಕಾತಿ; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

ಬೆಂಗಳೂರು:ಖಾಕಿ ಧರಿಸಿ ನಾಡಿನ ಸೇವೆ ಮಾಡಬೇಕೆಂಬ ಕನಸು ಹೊತ್ತಿರುವ ರಾಜ್ಯದ ಯುವಜನತೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ 2026-27ನೇ ಸಾಲಿನಲ್ಲಿ ಒಟ್ಟು 7,925 ಪೊಲೀಸ್ ಹುದ್ದೆಗಳ ಬೃಹತ್ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ವಿಶೇಷವೆಂದರೆ, ಈ ಬಾರಿ ಯಾವುದೇ ಅಕ್ರಮಗಳಿಗೆ ಆಸ್ಪದ ನೀಡದಂತೆ ಅತ್ಯಂತ ಪಾರದರ್ಶಕವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದಲೇ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸದ್ಯ ಅಧಿಸೂಚನೆ ಹೊರಬಿದ್ದಿರುವ ಹಾಗೂ ಶೀಘ್ರದಲ್ಲೇ ಪ್ರಕಟವಾಗಲಿರುವ ಹುದ್ದೆಗಳ ಸಂಪೂರ್ಣ ಸ್ಥಿತಿಗತಿ ಇಲ್ಲಿದೆ:

ಅರ್ಜಿ ಸಲ್ಲಿಕೆ ಪ್ರಗತಿಯಲ್ಲಿರುವ ಹುದ್ದೆಗಳು (ಕೂಡಲೇ ಅಪ್ಲೈ ಮಾಡಿ!)

1. ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (Civil PC)

ಒಟ್ಟು ಹುದ್ದೆಗಳು: 3,991 (ಕಲ್ಯಾಣ ಕರ್ನಾಟಕ: 596, ಉಳಿದ ಭಾಗ: 3,395)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03.07.2026 (ನಾಳೆಯೇ ಕೊನೆಯ ದಿನ!)

ಲಿಖಿತ ಪರೀಕ್ಷೆ ದಿನಾಂಕ: 02.08.2026

2. ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (Armed PC)

ಒಟ್ಟು ಹುದ್ದೆಗಳು: 1,600 (ಕಲ್ಯಾಣ ಕರ್ನಾಟಕ: 179, ಉಳಿದ ಭಾಗ: 1,421)

ಅರ್ಜಿ ಸಲ್ಲಿಕೆ ಅವಧಿ: 22.06.2026 ರಿಂದ 24.07.2026 ರವರೆಗೆ

ಲಿಖಿತ ಪರೀಕ್ಷೆ ದಿನಾಂಕ: 06.09.2026

ಶೀಘ್ರದಲ್ಲೇ ನೋಟಿಫಿಕೇಷನ್ ಹೊರಬರಲಿರುವ ಹುದ್ದೆಗಳು

ಕೆಳಗಿನ ಹುದ್ದೆಗಳ ಅಧಿಕೃತ ಅಧಿಸೂಚನೆಗಳು ಸಂಪೂರ್ಣವಾಗಿ ಸಿದ್ಧವಾಗಿದ್ದು, ಕೆಇಎ (KEA) ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲೇ ಪ್ರಕಟಗೊಳ್ಳಲಿವೆ:

ಡಿಟೆಕ್ಟಿವ್ ಸಬ್-ಇನ್ಸ್‌ಪೆಕ್ಟರ್ (Detective SI): ಒಟ್ಟು 20 ಹುದ್ದೆಗಳು (ಕಲ್ಯಾಣ ಕರ್ನಾಟಕ: 05, ಉಳಿದ ಭಾಗ: 15)

ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (CAR): ಒಟ್ಟು 1,789 ಹುದ್ದೆಗಳು (ಕಲ್ಯಾಣ ಕರ್ನಾಟಕ: 334, ಉಳಿದ ಭಾಗ: 1,455)

ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (Civil – KK Only): ಒಟ್ಟು 161 ಹುದ್ದೆಗಳು

ಪೊಲೀಸ್ ಕಾನ್ಸ್ಟೇಬಲ್ (ಸ್ಥಳೀಯ – KK Only): ಒಟ್ಟು 364 ಹುದ್ದೆಗಳು

ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ

ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆ (ಜುಲೈ 3) ಕೊನೆಯ ದಿನವಾಗಿರುವುದರಿಂದ ವೆಬ್‌ಸೈಟ್ ಸರ್ವರ್ ಬ್ಯುಸಿ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆಕಾಂಕ್ಷಿಗಳು ಕೊನೆಯ ಕ್ಷಣದವರೆಗೆ ಕಾಯದೆ ತಕ್ಷಣವೇ ಅರ್ಜಿ ಸಲ್ಲಿಸುವುದು ಉತ್ತಮ. ಅಧಿಕೃತ ಮಾಹಿತಿ ಮತ್ತು ಅರ್ಜಿ ಸಲ್ಲಿಕೆಗಾಗಿ ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಒಟ್ಟಾರೆ ಹುದ್ದೆಗಳ ಸಂಕ್ಷಿಪ್ತ ಮಾಹಿತಿ:

ಕಲ್ಯಾಣ ಕರ್ನಾಟಕ  ಒಟ್ಟು ಹುದ್ದೆಗಳು: 1,639

ಉಳಿದ ಭಾಗಗಳ  ಒಟ್ಟು ಹುದ್ದೆಗಳು: 6,286

ಒಟ್ಟು ಒಟ್ಟಾರೆ ಹುದ್ದೆಗಳು: 7,925

ಈ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಒಟ್ಟು 1,639 ಹುದ್ದೆಗಳನ್ನು ಮೀಸಲಿಡಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಈಗಾಗಲೇ ಸಿವಿಲ್ ಮತ್ತು ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಬೆಕೆಂದು ಸಚಿವರು ರಿದ್ದಾರೆ.  ಇಲಾಖೆಯ ಉಳಿದ ಹುದ್ದೆಗಳ ಅಧಿಸೂಚನೆಗಳೂ ಸಹ ಶೀಘ್ರದಲ್ಲೇ ಹೊರಬೀಳಲಿದ್ದು, ಇಡೀ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮುಗಿಸಲು ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

 

 

Related Articles

Comments (0)

Leave a Comment