ಟಿವಿಕೆ ಶಾಸಕ ವಿ.ಎಸ್. ಬಾಬು ಅವರ ಪಾರ್ಥಿವ ಶರೀರಕ್ಕೆ ಹೆಗಲು ನೀಡಿದ ಸಿಎಂ ವಿಜಯ್
- by Suddi Loka
- November 21, 2026
- 5 Views
ಚೆನ್ನೈ: ನಿಧನರಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಶಾಸಕ ವಿ.ಎಸ್. ಬಾಬು ಅವರ ಅಂತ್ಯಕ್ರಿಯೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಪಾಲ್ಗೊಂಡು, ಪಾರ್ಥಿವ ಶರೀರವನ್ನು ಹೊತ್ತು ಸಾಗಿಸುವ ಮೂಲಕ ಅಂತಿಮ ನಮನ ಸಲ್ಲಿಸಿದರು.
ನವೆಂಬರ್ 19ರಂದು ಹೃದಯಾಘಾತದಿಂದ ನಿಧನರಾದ ಬಾಬು, ದೀರ್ಘಕಾಲದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.

ಏಪ್ರಿಲ್ 2026ರ ವಿಧಾನಸಭೆ ಚುನಾವಣೆಯಲ್ಲಿ ಕೊಳತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು, ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಸೋಲಿಸಿ ಗಮನ ಸೆಳೆದಿದ್ದರು.


Comments (0)