ಸಿನಿಮಾ ಸ್ಟೈಲಲ್ಲೇ ರಿಯಲ್ ಲೈಫ್ ಲವ್ ಸ್ಟೋರಿ ಬಿಚ್ಚಿಟ್ಟ ರಮೇಶ್ ಅರವಿಂದ್: ವೈರಲ್ ಆಗ್ತಿದೆ ವೆಡ್ಡಿಂಗ್ ಅನಿವರ್ಸರಿ ನೋಟ್!
- by Suddi Team
- July 7, 2026
- 6 Views
ಬೆಂಗಳೂರು:ಸ್ಯಾಂಡಲ್ವುಡ್ನ ‘ಎವರ್ಗ್ರೀನ್ ಹೀರೋ’, ಸದಾ ಹಸನ್ಮುಖಿ ರಮೇಶ್ ಅರವಿಂದ್ ಅಂದ್ರೆ ತಕ್ಷಣ ನೆನಪಾಗೋದು ಅವರ ಪಾಸಿಟಿವ್ ಎನರ್ಜಿ ಮತ್ತು ನಗುಮೊಗ. ಕೇವಲ ಸಿನಿಮಾಗಳಲ್ಲಷ್ಟೇ ಅಲ್ಲ, ರಿಯಲ್ ಲೈಫ್ನಲ್ಲೂ ಆದರ್ಶ ದಂಪತಿಗಳಾಗಿ ಬಾಳುತ್ತಿರುವ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿ ಇಂದು (ಜುಲೈ 7) ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು ರಮೇಶ್ ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್ನಲ್ಲಿ ಹಂಚಿಕೊಂಡಿರುವ ಸಾಲುಗಳು ಈಗ ಗಾಂಧಿನಗರದಲ್ಲಿ ಮತ್ತು ಅಭಿಮಾನಿಗಳ ವಲಯದಲ್ಲಿ ಸಖತ್ ವೈರಲ್ ಆಗ್ತಿವೆ.
ಪತ್ನಿಯ ಕೇರಿಂಗ್, ರಮೇಶ್ ಬೇರಿಂಗ್!
ಅಂದಹಾಗೆ, ಈ ಜೋಡಿಯ ರೋಲರ್ ಕೋಸ್ಟರ್ ಲೈಫ್ ಸೀಕ್ರೆಟ್ ಏನು ಗೊತ್ತಾ? ಅದನ್ನು ರಮೇಶ್ ಅವರೇ ತಮ್ಮದೇ ಕಾವ್ಯಾತ್ಮಕ ಶೈಲಿಯಲ್ಲಿ ಬಿಚ್ಚಿಟ್ಟಿದ್ದಾರೆ. “ನಮ್ಮ ಜಂಟಿ ಪಯಣ ಇಷ್ಟು ಬ್ಯೂಟಿಫುಲ್ ಆಗಿರೋಕೆ ಕಾರಣ ಅರ್ಚನಾ ಅವರ ಕೊನೆಯಿಲ್ಲದ ಕಾಳಜಿ (Endlessly caring). ಹಾಗೇ ಲೈಫ್ನಲ್ಲಿ ಬರೋ ಸಣ್ಣಪುಟ್ಟ ಘರ್ಷಣೆಗಳನ್ನು ನಗುನಗುತ್ತಾ ನಿಭಾಯಿಸೋ ನನ್ನ ಸ್ವಭಾವ (Walking friction bearing)” ಅಂತ ರಮೇಶ್ ಬರೆದುಕೊಂಡಿದ್ದಾರೆ.
ದಾಂಪತ್ಯಕ್ಕೆ ರಮೇಶ್ ಕೊಟ್ಟ ‘ತ್ರಿಆರ್’ (3R) ಸೂತ್ರ:
ಚಿತ್ರರಂಗದ ಬಿಡುವಿಲ್ಲದ ಲೈಫ್ ನಡುವೆಯೂ ಫ್ಯಾಮಿಲಿಗೆ ಟೈಮ್ ಕೊಡೋ ರಮೇಶ್, ತಮ್ಮ ಸಂಸಾರದ ಏರಿಳಿತಗಳ ಬಗ್ಗೆಯೂ ಮುಕ್ತವಾಗಿ ಹೇಳಿಕೊಂಡಿದ್ದಾರೆ. “ನಮ್ಮ ಲೈಫ್ನಲ್ಲಿ ಹೆಚ್ಚಾಗಿ ನಗು, ಸಂತೋಷ ಇರುತ್ತೆ. ಅಪರೂಪಕ್ಕೆ ಕಣ್ಣೀರು, ನಿರಾಶೆಯೂ ಇರುತ್ತೆ. ಆದ್ರೆ ನಾವಿಬ್ರೂ ಯಾವುದ್ರಲ್ಲಿ ಬೆಸ್ಟ್ ಅಂದ್ರೆ, ತಕ್ಷಣವೇ ಸಂಬಂಧಕ್ಕೆ ರಿಪೇರಿ (Repair) ಮಾಡ್ತೀವಿ, ಹೊಸ ಉತ್ಸಾಹ ತುಂಬ್ತೀವಿ (Recharge) ಮತ್ತು ಹೊಸತನದೊಂದಿಗೆ (Refresh) ಮತ್ತೆ ಹ್ಯಾಪಿ ಮೂಡ್ಗೆ ಮರಳ್ತೀವಿ” ಅಂತ ಬರೆದಿದ್ದಾರೆ.
ಲೈಫ್ನಲ್ಲಿ ಏನೇ ಏರಿಳಿತ ಬಂದ್ರೂ ಈ ‘ತ್ರಿಆರ್’ ಸೂತ್ರ ಇದ್ರೆ ಸಂಸಾರ ನೌಕೆ ಸೂಪರ್ ಆಗಿ ಸಾಗುತ್ತೆ ಅನ್ನೋದಕ್ಕೆ ಈ ಚಂದನವನದ ಕ್ಯೂಟ್ ಕಪಲ್ ಸಾಕ್ಷಿ. ಸದ್ಯ ಈ ಪೋಸ್ಟ್ಗೆ ಅಭಿಮಾನಿಗಳು ಹಾಗೂ ಸಿನಿಮಾ ತಾರೆಯರು ಮನಸಾರೆ ಹರಸಿ ‘ಹ್ಯಾಪಿ ಅನಿವರ್ಸರಿ’ ಹೇಳ್ತಿದ್ದಾರೆ.
Related Articles
Thank you for your comment. It is awaiting moderation.


Comments (0)