Video-ಫೆ.6 ರಂದು ಪರೀಕ್ಷಾ ಪೆ ಚರ್ಚಾದಲ್ಲಿ ಪ್ರಧಾನಿ ಮೋದಿ ಭಾಗಿ

ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ನಡೆಸುವ ಸಂವಾದದ 9ನೇ ಆವೃತ್ತಿಯಾದ ‘ಪರೀಕ್ಷಾ ಪೇ ಚರ್ಚಾ 2026’ ಫೆಬ್ರವರಿ 6 ರಂದು ನಡೆಯಲಿದೆ. ಇದರ ಅಫೀಷಿಯಲ್ ಪ್ರೋಮೋ ಬಿಡುಗಡೆಯಾಗಿದೆ.

ಕಾರ್ಯಕ್ರಮವು ಫೆಬ್ರವರಿ 6, 2026 ರಂದು ಬೆಳಿಗ್ಗೆ 10:00 ಗಂಟೆಗೆ ಪ್ರಸಾರವಾಗಲಿದೆ. ಈ ಬಾರಿಯ ಚರ್ಚೆಯು ಹೊಸ ಸ್ವರೂಪದಲ್ಲಿರಲಿದ್ದು, ಪ್ರಧಾನಿಯವರು ದೆಹಲಿಯ 7, ಲೋಕ ಕಲ್ಯಾಣ ಮಾರ್ಗ ಸೇರಿದಂತೆ ದೇವಮೋಗ್ರಾ, ಕೊಯಮತ್ತೂರು, ರಾಯ್‌ಪುರ ಮತ್ತು ಗುವಾಹಟಿಯ ‘ಎಕ್ಸಾಮ್ ವಾರಿಯರ್ಸ್’ ಜೊತೆ ಈಗಾಗಲೇ ಸಂವಾದ ನಡೆಸಿದ್ದಾರೆ. ಈ ವರ್ಷದ ಕಾರ್ಯಕ್ರಮಕ್ಕೆ ದಾಖಲೆಯ 6.76 ಕೋಟಿಗೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 4.19 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಸೇರಿದ್ದಾರೆ.

ಈ ಸಂಚಿಕೆಯನ್ನು MyGov.in, ದೂರದರ್ಶನ, ಆಲ್ ಇಂಡಿಯಾ ರೇಡಿಯೋ ಮತ್ತು ಅಧಿಕೃತ ಯೂಟ್ಯೂಬ್ ಚಾನೆಲ್‌ಗಳಲ್ಲಿ ಲೈವ್ ಆಗಿ ವೀಕ್ಷಿಸಬಹುದು.

ಎಕ್ಸ್ ತಾಣದ ತಮ್ಮ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:

“ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ  #ParikshaPeCharcha ಕೂಡ ಮರಳಿದೆ! ಈ ಬಾರಿ, ದೇವಮೋಗ್ರ, ಕೊಯಮತ್ತೂರು, ರಾಯ್‌ಪುರ, ಗುವಾಹಟಿಯಲ್ಲಿ ಮತ್ತು ದೆಹಲಿಯ 7, ಲೋಕ ಕಲ್ಯಾಣ್ ಮಾರ್ಗದಲ್ಲಿ  #ExamWarriors ಗಳ ಜೊತೆಗೆ ಚರ್ಚಾ ಕಾರ್ಯಕ್ರಮ ನಡೆಯಿತು. ಪ್ರತಿಬಾರಿಯಂತೆ, ನನ್ನ ಯುವ ಸ್ನೇಹಿತರೊಂದಿಗೆ ಸಂವಹನ ನಡೆಸುವುದು ಮತ್ತು ಒತ್ತಡ ರಹಿತ ಪರೀಕ್ಷೆಗಳು ಹಾಗೂ ಹಲವಾರು ಇತರ ವಿಷಯಗಳನ್ನು ಚರ್ಚಿಸುವುದು ಉಲ್ಲಾಸಕರವಾಗಿದೆ.”ಎಂದು ಮೋದಿ ತಿಳಿಸಿದ್ದಾರೆ.

Related Articles

Comments (0)

Leave a Comment