ಎಚ್ಎಂಟಿಗೆ ಕಾಯಕಲ್ಪ: ಗಂಡಭೇರುಂಡ ಲಾಂಛನದ ವಾಚ್ಗಳಿಗೆ ಹೆಚ್ಚಿದ ಬೇಡಿಕೆ
- by Suddi Team
- June 26, 2025
- 38 Views

ಬೆಂಗಳೂರು: ಒಂದು ಕಾಲದಲ್ಲಿ ಮನೆ ಮಾತಾಗಿ ದೇಶೀಯ ಕೈಗಡಿಯಾರ ಲೋಕವನ್ನೇ ಆಳಿದ್ದ ಎಚ್ಎಂಟಿ (HMT) ಅವಸಾನದ ಅಂಚಿನಿಂದ ಮತ್ತೆ ಪುನಶ್ಚೇತನಗೊಳ್ಳುತ್ತಿದೆ. ವಾಚ್ ಮಾರುಕಟ್ಟೆಯಲ್ಲಿ ಕನ್ನಡದ ಅಂಕಿಗಳುಳ್ಳ, ಗಂಡಭೇರುಂಡ ಲಾಂಛನದ ವಾಚ್ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಎಚ್ಎಂಟಿ ಹವಾ ಸೃಷ್ಟಿಯಾಗುತ್ತಿದೆ.
ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಎಚ್ಎಂಟಿ ಈಗ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಗಂಡಭೇರುಂಡ ಲಾಂಛನ ಮತ್ತು ಕನ್ನಡ ಸಂಖ್ಯೆಗಳಿರುವ ಸರಣಿಯ ಹೊಸ ವಾಚ್ಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಆನ್ಲೈನ್, ಆಫ್ಲೈನ್ ಮಾರುಕಟ್ಟೆಯಲ್ಲಿ ಹೊಸ ಸರಣಿಯ ವಾಚ್ಗಳು ಹೆಚ್ಚು ಮಾರಾಟವಾಗುತ್ತಿದ್ದು, ಎಚ್ಎಂಟಿ ಹೊಸ ಸರಣಿಯ ವಾಚ್ಗಳ ಟ್ರೆಂಡ್ ಸೃಷ್ಟಿಯಾಗುತ್ತಿದೆ.
ಕನ್ನಡಿಗರ ಹೆಗ್ಗುರುತಾಗಿರುವ ಎಚ್ಎಂಟಿ ವಾಚ್ ತಯಾರಿಕಾ ಕಾರ್ಖಾನೆಯ ಪುನಶ್ಚೇತನಕ್ಕೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಶ್ರಮವಹಿಸುತ್ತಿದ್ದಾರೆ. “ಕನ್ನಡಿಗರ ಹೆಮ್ಮೆಯ ಎಚ್ಎಂಟಿ ವಾಚ್ ಕಟ್ಟೋಣ, ಎಚ್ಎಂಟಿ ಸಂಸ್ಥೆ ಉಳಿಸೋಣ. ನಮ್ಮ ಎಚ್ಎಂಟಿ, ನಮ್ಮ ಹೆಮ್ಮೆ” ಎಂದು ಜೆಡಿಎಸ್ ಅಭಿಯಾನ ಆರಂಭಿಸಿದೆ.
ಪುನಶ್ಚೇತನದ ಹಾದಿಯಲ್ಲಿರುವ ಎಚ್ಎಂಟಿಗೆ ಹೊಸ ಸರಣಿಯ ವಾಚ್ಗಳು ಬೂಸ್ಟ್ ನೀಡಿವೆ. ಮಾರುಕಟ್ಟೆಗೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಆವೃತ್ತಿಯ ವಾಚ್ಗಳು ಸಂಪೂರ್ಣ ಮಾರಾಟವಾಗಿದ್ದು, ಜನಪ್ರಿಯತೆಯ ಜತೆಗೆ ಗ್ರಾಹಕರಿಂದ ಹೆಚ್ಚು ಬೇಡಿಕೆ ಸೃಷ್ಟಿಯಾಗಿರುವುದು ಎಚ್ಎಂಟಿ ಸಂಸ್ಥೆಯ ಪಾಲಿಗಂತೂ ಸಂತಸದ ವಿಷಯವಾಗಿದೆ.
Related Articles
Thank you for your comment. It is awaiting moderation.
Comments (0)