ಡಿಕೆಶಿ ಪ್ರಮಾಣ ವಚನಕ್ಕೆ 7200 ಕಡೆ ಕಾರ್ಯಕ್ರಮ!
- by Suddi Team
- May 19, 2020
- 18 Views

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಕಾರ್ಯಕ್ರಮ ಅತ್ಯಂತ ವಿನೂತನವಾಗಿರಲಿದೆ. ರಾಜ್ಯದ ಉದ್ದಗಲಕ್ಕೂ 7200 ಕಡೆ ಕಾರ್ಯಕ್ರಮ ನಡೆಯಲಿದೆ. ವಾರ್ಡ್, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾದ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಮಾಣ ವಚನ ಸ್ವೀಕರಿಸಲು ಕೊರೋನಾ ಅಡ್ಡಿಪಡಿಸಿತ್ತು. ಇದೀಗ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಮಾಣ ವಚನ ಕಾರ್ಯಕ್ರಮದ ಕುರಿತು ಸ್ವತಃ ಡಿ.ಕೆ.ಶಿವಕುಮಾರ್ ಅವರೇ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ರು, ಪದಗ್ರಹಣಕ್ಕೆ ಒಂದು ವಿನೂತನ ಕಾರ್ಯಕ್ರಮ ಮಾಡಲಾಗುತ್ತೆ. ಇದು ಕೇವಲ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಅಲ್ಲ. ರಾಜ್ಯದ ಉದ್ದಗಲಕ್ಕೂ 7200 ಕಡೆ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಿದ್ದೇವೆ. ವಾರ್ಡ್, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಸಂವಿಧಾನದ ಪೀಠಿಕೆ ಓದಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಪ್ರತಿಜ್ಞೆ ಸ್ವೀಕರಿಸುವ ಯೋಜನೆ ರೂಪಿಸಿದ್ದೇವೆ ಅಂತಾ ತಿಳಿಸಿದ್ರು.
ಪದಗ್ರಹಣ ಕಾರ್ಯಕ್ರಮಕ್ಕೆ ಹಲವಾರು ನೂತನ ಯೋಜನೆಗಳನ್ನ ರೂಪಿಸಲಾಗಿದೆ. ಆದ್ರೆ ಇನ್ನೂ ದಿನಾಂಕ ಮಾತ್ರ ಫಿಕ್ಸ್ ಆಗಿಲ್ಲ. ಈ ಕುರಿತು ಮಾತನಾಡಿದ ಡಿಕೆಶಿ, ಮೇ 31 ರ ನಂತರ ಪದಗ್ರಹಣ ಕಾರ್ಯಕ್ರಮವನ್ನ ತಿಳಿಸ್ತೇನೆ. ಪಕ್ಷ ಸಂಘಟನೆ ಮಾಡೋಕೆ ಒತ್ತು ನೀಡ್ತೇವೆ. ಕಾರ್ಯಕ್ರಮಕ್ಕೆ ಯಾರೂ ಬರುವುದು ಬೇಡ, ಮಾಧ್ಯಮಗಳ ಮೂಲಕವೇ ನಾವು ಪದಗ್ರಹಣ ಕಾರ್ಯಕ್ರಮ ತೋರಿಸ್ತೇವೆ. ಪ್ರತಿ ಕ್ಷೇತ್ರದ ವಿಚಾರವನ್ನೂ ಗೌಪ್ಯವಾಗಿ ಪಡೆದುಕೊಳ್ತೇವೆ. ನಂತರ ಜನರ ಧ್ಚನಿಯಾಗಿ ಕೆಲಸ ಮಾಡ್ತೇವೆ. ಅಲ್ಲಿಯವರೆಗೆ ಎಲ್ಲ ಮುಖಂಡರನ್ನ ಕರೆಸಿ ಚರ್ಚಿಸುತ್ತೇನೆ ಅಂತಾ ತಿಳಿಸಿದ್ರು.
Related Articles
Thank you for your comment. It is awaiting moderation.
Comments (0)