ಕುರಿಗಾಹಿಗಳೊಂದಿಗೆ ಆತ್ಮೀಯ ಮಾತುಕತೆ; ಕುರಿ ಸಾಕಾಣಿಕೆಯ ಸಮಸ್ಯೆ, ಅಹವಾಲು ಆಲಿಸಿದ ಮುಖ್ಯಮಂತ್ರಿ
- by Suddi Loka
- November 28, 2026
- 12 Views
ಹಾವೇರಿ: ಕುರಿಗಾಹಿಗಳ ಪರಿಶ್ರಮ ಗ್ರಾಮೀಣ ಆರ್ಥಿಕತೆಯ ಬಲವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾಗಿನೆಲೆಗೆ ತೆರಳುವ ಮಾರ್ಗಮಧ್ಯೆ ಕುರುಬ ಸಮುದಾಯದ ಕುರಿಗಾಹಿಗಳೊಂದಿಗೆ ಆತ್ಮೀಯವಾಗಿ ಸಮಯ ಕಳೆದ ಅವರು, ಕುರಿ ಸಾಕಾಣಿಕೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವರ ಕಷ್ಟ-ಸುಖಗಳನ್ನು ಆಲಿಸಿದರು. ಈ ವೇಳೆ ಕುರಿಗಾಹಿಗಳಿಂದ ಅಹವಾಲುಗಳನ್ನು ಸ್ವೀಕರಿಸಿದರು.

ಕುರಿಗಾಹಿಗಳ ಪ್ರೀತಿ ಮತ್ತು ಆತ್ಮೀಯ ಆತಿಥ್ಯ ಮನಮುಟ್ಟುವಂತಿತ್ತು. ಕುರಿಮರಿಯನ್ನು ಉಡುಗೊರೆಯಾಗಿ ನೀಡಿ, ಕಂಬಳಿ ಹೊದಿಸಿ ಗೌರವಿಸಿದ ಅವರ ಅಭಿಮಾನಕ್ಕೆ ಹೃದಯ ತುಂಬಿ ಬಂದಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಚಿವ ರುದ್ರಪ್ಪ ಲಮಾಣಿ, ಶಾಸಕರಾದ ಪ್ರಕಾಶ್ ಕೋಳಿವಾಡ, ಶ್ರೀನಿವಾಸ್ ಮಾನೆ, ಬಸವರಾಜ ನೀಲಪ್ಪ ಶಿವಣ್ಣನವರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


Comments (0)