ಕೆಎಸ್‌ಆರ್‌ಟಿಸಿ ತಪಾಸಣಾ ಕಾರ್ಯಾಚರಣೆ: ಟಿಕೆಟ್ ರಹಿತ 5,737 ಪ್ರಯಾಣಿಕರಿಗೆ ₹9.75 ಲಕ್ಷ ದಂಡ!
- by Suddi Team
- November 23, 2026
- 11 Views
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಅಕ್ಟೋಬರ್ ತಿಂಗಳಲ್ಲಿ ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ಸಂಚರಿಸುವ ತನ್ನ ಬಸ್‌ಗಳ ಮೇಲೆ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿದ್ದು, ಟಿಕೆಟ್ ಪಡೆಯದೆ ಪ್ರಯಾಣಿಸಿದ 5,737 ಮಂದಿಗೆ ಒಟ್ಟು ₹9,75,911 ದಂಡ ವಿಧಿಸಿದೆ.
ನಿಗಮದ ತನಿಖಾ ತಂಡಗಳು ಅಕ್ಟೋಬರ್ ಮಾಹೆಯಲ್ಲಿ ಒಟ್ಟು 46,742 ವಾಹನಗಳನ್ನು ತಪಾಸಣೆಗೆ ಒಳಪಡಿಸಿದ್ದು, 4,701 ಪ್ರಕರಣಗಳನ್ನು ಪತ್ತೆಹಚ್ಚಿವೆ. ಇದೇ ವೇಳೆ, ನಿಗಮದ ಆದಾಯದಲ್ಲಿ ಸೋರಿಕೆಯಾಗುತ್ತಿದ್ದ ₹1,44,921 ಮೊತ್ತವನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದು, ಕರ್ತವ್ಯ ಲೋಪ ಎಸಗಿದ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಇಲಾಖಾ ನಿಯಮಗಳ ಅನ್ವಯ ಕಠಿಣ ಶಿಸ್ತು ಕ್ರಮ ಜರುಗಿಸಲಾಗಿದೆ.
ಸಾರ್ವಜನಿಕರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಅಧಿಕೃತ ಟಿಕೆಟ್ ಅಥವಾ ಪಾಸ್ ಪಡೆದುಕೊಂಡು ಪ್ರಯಾಣಿಸುವ ಮೂಲಕ ನಿಗಮದೊಂದಿಗೆ ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.
Related Articles
Thank you for your comment. It is awaiting moderation.


Comments (0)