ಅಯ್ಯಪ್ಪ ಸ್ವಾಮಿ ಭಕ್ತರಿಗೆ ಕೆಎಸ್‌ಆರ್‌ಟಿಸಿ ಸಿಹಿಸುದ್ದಿ: ನ. 28ರಿಂದ ಬೆಂಗಳೂರು–ನೀಲಕ್ಕಲ್ (ಶಬರಿಮಲೆ) ನಡುವೆ ನೂತನ ಐರಾವತ ವೋಲ್ವೋ ಬಸ್ ಸೇವೆ

ಬೆಂಗಳೂರು: ಶಬರಿಮಲೆ ಯಾತ್ರೆ ಕೈಗೊಳ್ಳುವ ಅಯ್ಯಪ್ಪ ಸ್ವಾಮಿ ಭಕ್ತರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬೆಂಗಳೂರು ಕೇಂದ್ರೀಯ ವಿಭಾಗವು ಇದೇ ನವೆಂಬರ್ 28ರಿಂದ ಬೆಂಗಳೂರು–ನೀಲಕ್ಕಲ್ (ಪಂಪಾ-ಶಬರಿಮಲೆ) ಮಾರ್ಗದಲ್ಲಿ ಹೊಸದಾಗಿ ‘ಐರಾವತ ವೋಲ್ವೋ’ ಬಸ್ ಸಾರಿಗೆಯನ್ನು ಆರಂಭಿಸುತ್ತಿದೆ.

ಈ ಐಷಾರಾಮಿ ಬಸ್ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಟು ಮೈಸೂರು, ಕೋಯಿಕ್ಕೋಡ್, ತ್ರಿಶೂರ್, ಕೊಟ್ಟಾಯಂ ಹಾಗೂ ಏರುಮೇಲಿ ಮಾರ್ಗವಾಗಿ ನೀಲಕ್ಕಲ್ (ಪಂಪಾ-ಶಬರಿಮಲೆ) ತಲುಪಲಿದೆ.

ಬಸ್ ವೇಳಾಪಟ್ಟಿ ವಿವರ:

ಬೆಂಗಳೂರಿನಿಂದ ಶಬರಿಮಲೆಗೆ: ಮಧ್ಯಾಹ್ನ 1:50ಕ್ಕೆ (13:50) ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಡುವ ಬಸ್, ಸಂಜೆ 5:35ಕ್ಕೆ (17:35) ಮೈಸೂರಿಗೆ ತಲುಪಿ, ಮರುದಿನ ಬೆಳಿಗ್ಗೆ 6:45ಕ್ಕೆ ನೀಲಕ್ಕಲ್ (ಪಂಪಾ-ಶಬರಿಮಲೆ) ತಲುಪಲಿದೆ.

ಶಬರಿಮಲೆಯಿಂದ ಬೆಂಗಳೂರಿಗೆ: ಸಂಜೆ 6:00 ಗಂಟೆಗೆ (18:00) ನೀಲಕ್ಕಲ್‌ನಿಂದ ಹೊರಟು, ಮರುದಿನ ಬೆಳಿಗ್ಗೆ 7:15ಕ್ಕೆ ಮೈಸೂರು ಹಾಗೂ ಬೆಳಿಗ್ಗೆ 10:00 ಗಂಟೆಗೆ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣಕ್ಕೆ ವಾಪಸಾಗಲಿದೆ.

ಪ್ರಯಾಣ ದರ (ವಯಸ್ಕರಿಗೆ – ಆನ್‌ಲೈನ್ ದರ):

ಬೆಂಗಳೂರು (ಶಾಂತಿನಗರ) – ನೀಲಕ್ಕಲ್: ₹1,980

ಮೈಸೂರು – ನೀಲಕ್ಕಲ್: ₹1,880

ಭಕ್ತಾದಿಗಳು ಹಾಗೂ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್ ಅಥವಾ ಬುಕಿಂಗ್ ಕೌಂಟರ್‌ಗಳ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಿ ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

 

Related Articles

Comments (0)

Leave a Comment