ಚಿಕ್ಕಮಗಳೂರು: ದೇವರ ಕಾರೇಹಳ್ಳಿಯಲ್ಲಿ ಶ್ರೀ ಕಾಳಿಕಾಂಬದೇವಿ ನೂತನ ವಿಗ್ರಹ ದೃಷ್ಟಿ ಯಪೂಜೆ, ರಾಜಗೋಪುರ ಲೋಕಾರ್ಪಣೆ

ಚಿಕ್ಕಮಗಳೂರು: “ಧರ್ಮೋ ರಕ್ಷತಿ ರಕ್ಷಿತಃ” ಎಂದರೆ ಧರ್ಮವನ್ನು ರಕ್ಷಿಸುವವರನ್ನು ಧರ್ಮವೂ ರಕ್ಷಿಸುತ್ತದೆ ಎಂದರ್ಥ. ಬಸವಣ್ಣನವರು “ದಯೆಯೇ ಧರ್ಮದ ಮೂಲವಯ್ಯ” ಎಂದು ಧರ್ಮದ ಅರ್ಥವನ್ನು ಸಾರಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಹೇಳಿದರು.

ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯ ದೇವರ ಕಾರೇಹಳ್ಳಿಯಲ್ಲಿ ಶ್ರೀ ಕಾಳಿಕಾಂಬದೇವಿಯ ನೂತನ ವಿಗ್ರಹ ದೃಷ್ಟಿ ಪೂಜೆ, ರಾಜಗೋಪುರ ಲೋಕಾರ್ಪಣೆ ಹಾಗೂ ಮಹಾದ್ವಾರ ಕಳಸಾರೋಹಣ ಕುಂಭಾಭಿಷೇಕದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಸವಣ್ಣನವರ “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ…” ಎಂಬ ವಚನದ ಆಶಯವನ್ನು ವಿವರಿಸಿದ ಅವರು, ಬೇರೆಯವರನ್ನೂ ನಮ್ಮಂತೆಯೇ ಕಂಡರೆ ಅದೇ ಕೈಲಾಸ ಎಂದರು.

ನಾವು ಇತರರಿಗೆ ಒಳಿತು ಮಾಡಿದರೆ ನಮಗೂ ಒಳಿತಾಗುತ್ತದೆ ಎಂಬುದು ಹಿರಿಯರ ನಂಬಿಕೆ. ಬೇವಿನ ಬೀಜ ಬಿತ್ತಿ ಮಾವಿನ ಹಣ್ಣು ನಿರೀಕ್ಷಿಸಲು ಸಾಧ್ಯವಿಲ್ಲ. ಒಳ್ಳೆಯ ಕಾರ್ಯ ಮಾಡಿದಾಗ ಮಾತ್ರ ಒಳ್ಳೆಯ ಫಲ ಸಿಗುತ್ತದೆ. ಆದ್ದರಿಂದ ಸಾಧ್ಯವಾದಷ್ಟೂ ಎಲ್ಲರಿಗೂ ಒಳಿತು ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

Related Articles

Comments (0)