ಇಸ್ರೇಲ್ ಸಂಸತ್ ಸ್ಪೀಕರ್ ಆಗಿ ನೆತನ್ಯಾಹು ವಿರೋಧಿ ಬಣದ ಮತಾನ್ ಕಹಾನಾ ಆಯ್ಕೆ
- by Suddi Loka
- November 18, 2026
- 13 Views
ಜೆರುಸಲೇಂ: ಇಸ್ರೇಲ್ ಸಂಸತ್ತಿನ (ನೆಸೆಟ್) ಸ್ಪೀಕರ್ ಆಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರೋಧಿ ಬಣದ ಮತಾನ್ ಕಹಾನಾ ಆಯ್ಕೆಯಾಗಿದ್ದಾರೆ. ಮಂಗಳವಾರ ನಡೆದ ಚುನಾವಣೆಯಲ್ಲಿ ಕಹಾನಾ 66 ಮತಗಳನ್ನು ಪಡೆದರೆ, ಲಿಕುಡ್ ಪಕ್ಷದ ಓಫಿರ್ ಕಾಟ್ಜ್ 52 ಮತಗಳನ್ನು ಪಡೆದಿದ್ದಾರೆ.
ಗಾಡಿ ಐಸೆನ್ಕೋಟ್ ನೇತೃತ್ವದ ಯಾಶರ್ ಪಕ್ಷದ ಸಂಸದರಾಗಿರುವ ಕಹಾನಾ ಅವರಿಗೆ ಅರಬ್ ಪಕ್ಷಗಳ ಬೆಂಬಲವೂ ದೊರೆತಿದೆ. ಈ ಬದಲಾವಣೆಯಿಂದ ವಿರೋಧ ಪಕ್ಷಗಳಿಗೆ ಸಂಸತ್ತಿನ ಕಾರ್ಯಸೂಚಿ ನಿರ್ಧರಿಸುವ ಅವಕಾಶ ಸಿಕ್ಕಿದೆ.

ಅಕ್ಟೋಬರ್ 27ರಂದು ನಡೆದ ಚುನಾವಣೆಯಲ್ಲಿ ನೆತನ್ಯಾಹು ವಿರೋಧಿ ಬಣ 67 ಸ್ಥಾನಗಳನ್ನು ಹಾಗೂ ಅವರ ಬಲಪಂಥೀಯ ಮೈತ್ರಿಕೂಟ 53 ಸ್ಥಾನಗಳನ್ನು ಗೆದ್ದಿತ್ತು. ಮಾಜಿ ಸೇನಾ ಮುಖ್ಯಸ್ಥ ಐಸೆನ್ಕೋಟ್ ಅವರಿಗೆ ಸರ್ಕಾರ ರಚಿಸಲು ಡಿಸೆಂಬರ್ 6ರವರೆಗೆ ಕಾಲಾವಕಾಶವಿದೆ.
ವಿದೇಶಾಂಗ ಮತ್ತು ರಕ್ಷಣಾ ಸಮಿತಿ ಅಧ್ಯಕ್ಷರಾಗಿ ಅವಿಗ್ಡರ್ ಲೀಬರ್ಮನ್ ಹಾಗೂ ಹಣಕಾಸು ಸಮಿತಿ ಅಧ್ಯಕ್ಷರಾಗಿ ಲಿರಾನ್ ಅವಿಸಾರ್ ಬೆನ್ ಹೋರಿನ್ ನೇಮಕಕ್ಕೆ ವಿರೋಧಿ ಬಣ ಒಪ್ಪಿಗೆ ಸೂಚಿಸಿದೆ.


Comments (0)