ಕೆಎಸ್‌ಆರ್‌ಟಿಸಿ ನೌಕರರಿಗೆ ಸಿಹಿ ಸುದ್ದಿ: ಏಪ್ರಿಲ್ ತಿಂಗಳ ವೇತನ ಏ. 30ಕ್ಕೇ ಪಾವತಿ
- by Suddi Team
- April 21, 2026
- 11 Views
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಸಾವಿರಾರು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಮತ್ತು ನಿಗಮದ ಆಡಳಿತ ಮಂಡಳಿಯು ಸಿಹಿ ಸುದ್ದಿ ನೀಡಿದೆ. ಏಪ್ರಿಲ್-2026ರ ಮಾಹೆಯ ವೇತನವನ್ನು ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಪಾವತಿಸಲು ನಿರ್ಧರಿಸಲಾಗಿದೆ.
ಸಾಮಾನ್ಯವಾಗಿ ನಿಗಮದ ನೌಕರರಿಗೆ ಪ್ರತಿ ತಿಂಗಳ 1ನೇ ತಾರೀಖಿನಂದು ವೇತನ ಪಾವತಿಯಾಗುತ್ತಿತ್ತು. ಆದರೆ, ಮೇ 1ರಂದು ಕಾರ್ಮಿಕ ದಿನಾಚರಣೆ (ಮೇ ದಿನ) ಅಂಗವಾಗಿ ಬ್ಯಾಂಕ್‌ಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ, ನೌಕರರಿಗೆ ತೊಂದರೆಯಾಗಬಾರದೆಂದು ಒಂದು ದಿನ ಮೊದಲೇ ಅಂದರೆ ಏಪ್ರಿಲ್ 30ರಂದೇ ವೇತನವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲು ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ್ದಾರೆ.
ಈ ಕುರಿತು ಲೆಕ್ಕಪತ್ರ ಶಾಖೆಯು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಪ್ರಾದೇಶಿಕ ಕಾರ್ಯಾಗಾರಗಳ ವ್ಯವಸ್ಥಾಪಕರು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಕಾರ್ಮಿಕ ದಿನಾಚರಣೆಯ ಸಂಭ್ರಮವನ್ನು ಸಾರಿಗೆ ನೌಕರರು ಸಕಾಲದಲ್ಲಿ ಆಚರಿಸಲು ಈ ಕ್ರಮವು ಸಹಕಾರಿಯಾಗಲಿದೆ
Related Articles
Thank you for your comment. It is awaiting moderation.


Comments (0)