ಪ್ರೇಮಲೋಕ ಸಿನಿಮಾ ಚಿತ್ರೀಕರಣದ ವೇಳೆ ಹಂಸಲೇಖರಿಗೆ ಬೈದು ಬುದ್ದಿ ಹೇಳಿದ್ರಂತೆ ವೀರಸ್ವಾಮಿ..

0
7

ಬೆಂಗಳೂರು: ಸಂಗೀತ ಮಾಂತ್ರಿಕ, ಸ್ವರ ಸಾಮ್ರಾಟ,ನಾದಬ್ರಹ್ಮ ಹಂಸಲೇಖರಿಗೆ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಎನ್ ವೀರಸ್ವಾಮಿ ತರಾಟೆ ತೆಗೆದುಕೊಂಡು ಬುದ್ದಿ ಮಾತು ಹೇಳಿದ್ದರು.ಕನ್ನಡ ಚಿತ್ರರಂಗದ ಮೈಲ್ ಸ್ಟೋನ್ ಸಿನಿಮಾ ಪ್ರೇಮಲೋಕ ಚಿತ್ರೀಕರಣದ ವೇಳೆ ಈ ಘಟನೆ ನಡೆದಿತ್ತು.

ಅದು 80 ರ ದಶಕ.ಕನ್ನಡ ಚಿತ್ರರಂಗ ಹೊಸ ಆಯಾಮದತ್ತಾ ತಿರುಗುತ್ತಿದ್ದ ಸಮಯ.ರಾಜ್ ಕುಮಾರ್,ವಿಷ್ಣುವರ್ಧನ್, ಶಂಕರ್ ನಾಗ್,ಅಂಬರೀಷ್ ಮಿಂಚುತ್ತಿದ್ದ ಕಾಲಘಟ್ಟದಲ್ಲಿ ಬೆಳ್ಳಿಪರದೆಯ ಚಿತ್ರಣವನ್ನೇ ಬದಲಿಸಿದ ಜೋಡಿ ರವಿಚಂದ್ರನ್ ಹಂಸಲೇಖ ಜೋಡಿ.ಪ್ರೇಮಲೋಕ ಚಿತ್ರದ ಮೂಲಕ ದೇಶದ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ್ದ ಹಿರಿಮೆ ಈ ಜೋಡಿಗೆ ಸಲ್ಲಲಿದೆ.

ಅಂದ ಹಾಗೆ ಈ ಚಿತ್ರದ ಚಿತ್ರೀಕರಣದ ವೇಳೆ ರವಿಚಂದ್ರನ್ ತಂದೆ ಹಿರಿಯ ನಿರ್ಮಾಪಕ ಎನ್ ವೀರಸ್ವಾಮಿ ಹಂಸಲೇಖರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಹೇಯ್ ಯಾರಿವನೂ… ಈ ಮನ್ಮಥನೂ…ಹಾಡಿನ ಚಿತ್ರೀಕರಣದ ವೇಳೆ ಹಾಡಿನಲ್ಲೇ ಫೈಟ್ ಸೀನ್ ಶೂಟ್ ಮಾಡಲಾಗುತ್ತಿತ್ತು. ಈ ವೇಳೆ ಸ್ಟಂಟ್ ಮ್ಯಾನ್ ಬೈಕ್ ಜಂಪ್ ಮಾಡುವ ಸೀನ್ ವೇಳೆ ಅವಘಡವಾಗುತ್ತದೆ. ಸಂಗೀತಕ್ಕೆ ತಕ್ಕ ರೀತಿಯಲ್ಲಿ ಬೈಕ್ ಜಂಪ್ ಮಾಡಲು ಹೋಗಿ ಸ್ಟಂಟ್ ಮ್ಯಾನ್ ಬಿದ್ದು ಸ್ಪೈನಲ್ ಕಾರ್ಡ್ ಗೆ ಏಟು ಮಾಡುಕೊಂಡು ಆಸ್ಪತ್ರೆ ಸೇರಿದ್ದರು.

ಇದನ್ನು ಕಂಡ ವೀರಸ್ವಾಮಿ ಗರಂ ಆಗಿದ್ದರು. ಸ್ಟಂಟ್ ಮ್ಯಾನ್ ಗೆ ಚಿಕತ್ಸೆ ಕೊಡಿಸುವ ವ್ಯವಸ್ಥೆ ಮಾಡಿ ನಂತರ ನೇರವಾಗಿ ಹಂಸಲೇಖರಿಗೆ ಕರೆ ಮಾಡಿ ಬೈದು ಬುದ್ದಿಮಾತು ಹೇಳಿದ್ದರು. ಹಾಡಿನ‌ ಚಿತ್ರೀಕರಣದಲ್ಲಿ ಯಾರಾದರೂ ಫೈಟ್ ಶೂಟ್ ಮಾಡ್ತಾರಾ? ಸಂಗೀತಕ್ಕೆ ತಕ್ಕ ಸ್ಟಂಟ್ ಶೂಟ್ ಮಾಡೋಕಾಗುತ್ತಾ? ಬುದ್ದಿ ಬೇಡವಾ ನಿಮ್ಗೆ, ಮೊದಲ ಹಾಡಿನ ಚಿತ್ರೀಕರಣ ಮಾಡಿಕೊಳ್ಳಿ ನಂತರ ಫೈಟ್ ಸೀನ್ ಪ್ರತ್ಯೇಕವಾಗಿ ಶೂಟ್ ಮಾಡಿಕೊಂಡು ಕಡೆಯಲ್ಲಿ ಮುಕ್ಸಿಂಗ್ ಮಾಡಿಕೊಳ್ಳಿ ಎಂದು ಬುದ್ದಿ ಮಾತು ಹೇಳಿದ್ದರಂತೆ.

ವೀರಸ್ವಾಮಿ ಸೂಚನೆ ನಂತರ ಹಾಡಿನಲ್ಲೇ ಫೈಟ್ ಸೀನ್ ಒಟ್ಟಿಗೆ ಶೂಟ್ ಮಾಡುವುದನ್ನು ಬಿಟ್ಟು ಪ್ರತ್ಯೇಕವಾಗಿ ಶೂಟ್ ಮಾಡಿ ನಂತರ ಮಿಕ್ಸಿಂಗ್ ಮಾಡಿದ್ದರು. ಈ ವಿಷಯವನ್ನು ಸ್ವತಃ ಹಂಸಲೇಖ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡಿದ್ದಾರೆ.

- Call for authors -

LEAVE A REPLY

Please enter your comment!
Please enter your name here