ರಾಹುಲ್ ಗಾಂಧಿ ನಾಯಕತ್ವಕ್ಕೆ ಅಭ್ಯಂತರವಿಲ್ಲ: ಎಚ್.ಡಿ ದೇವೇಗೌಡ

0
132

ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಾಯಕತ್ವ ವಹಿಸುವುದಕ್ಕೆ ನನ್ನ ಅಭ್ಯಂತರವಿಲ್ಲ ಎನ್ನುವ ಮೂಲಕ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಕುರಿತು ಜೆಡಿ ಎಸ್ ವರಿಷ್ಠ ಎಚ್.ಡಿ ದೇವೇಗೌಡ ಸುಳಿವು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ,ಮುಂದೆ ಬರುವ ಲೋಕಸಭಾ, ಜಿಲ್ಲಾ, ತಾಲೂಕು ಪಂಚಾಯತ ಚುನಾವಣೆಗೆ ಪಕ್ಷವನ್ನ ಚುರುಕು ಗೊಳಿಸಲು ಇವತ್ತು ಹುಬ್ಬಳ್ಳಿಗೆ ಬಂದಿದ್ದೆನೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ನಮ್ಮ ಪಕ್ಷಕ್ಕೆ ಸರಿಯಾದ ಫಲಿತಾಂಶ ಬಂದಿಲ್ಲ ಕುಮಾರಸ್ವಾಮಿ ಮುಖ್ಯಮಂತ್ರಿ ಇರುವುದರಿಂದ ಪಕ್ಷ ಸಂಘಟನೆ ಮಾಡಲು ಸಮಯ ಸಿಗುವುದಿಲ್ಲ ಇದರಿಂದ ನಾನು ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದ್ರು.

ತೃತೀಯ ರಂಗ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ
ಎನ್‌ಡಿಎ ಹೊರತು ಪಡಿಸಿ ಎಲ್ಲಾ ಮುಖಂಡರು ಬೆಂಗಳೂರಿನಲ್ಲಿ ಸೇರಿದ್ದೆವು. ದೇಶದ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಶಕ್ತಿ ಹೆಚ್ಚಿಗೆ ಇದೆ ಇನ್ನೂ ಕೆಲವು ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಮಾತ್ರ ಇವೆ. ಲೋಕಸಭಾ ಚುನಾವಣೆ ಮುಂಚೆ ಕೆಲವು ಪಕ್ಷಗಳು ಹೊಂದಾಣಿಕೆ ಆಗಬಹುದು ಚುನಾವಣಾ ನಂತರವೂ ಹೊಂದಾಣಿಕೆ ಆಗಬಹುದು.ನನಗೆ ನನ್ನ ಪಕ್ಷವನ್ನ ಉಳಿಸಿಕೊಳ್ಳವುದು ಮುಖ್ಯವಾಗಿದೆ ಎಂದ್ರು.

ಕಳೆದ ಚುನಾವಣೆಯಲ್ಲಿ ಕೆಲವು ಜಿಲ್ಲೆಯಲ್ಲಿ ಶೂನ್ಯ ಫಲಿತಾಂಶ ಬಂದಿದೆ ಇದರಿಂದ ಬಹಳ ನೋವಾಗಿದೆ.ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸಬೇಕಿದೆ.ನಮ್ಮ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಎಷ್ಟು ಸೀಟು ನಮಗೆ ಬರುತ್ತವೆ ಎಂಬುದು ಖಚಿತವಾಗಿಲ್ಲ ಜೊತೆಗೆ ರಾಹುಲ್ ಗಾಂಧಿ ಅವರ ನಾಯಕತ್ವಕ್ಕೆ ನನ್ನ ಅಭ್ಯಂತರವೇನೂ ಇಲ್ಲಾ.ಚುನಾವಣಾ ಸಮಯದಲ್ಲಿ ಅದು ನಿರ್ಧಾರವಾಗಲಿದೆ ಎಂದ್ರು.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ ನನ್ನ ಕಾಲದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗಿದೆ.ಉತ್ತರ ಕರ್ನಾಟಕಕ್ಕೆ ಯಾವುದೇ ತಾರತಮ್ಯ ಆಗಿಲ್ಲ ಭಾಷಾವಾರು ಪ್ರಾಂತದ ನಂತರ ಉತ್ತರ ಕರ್ನಾಟಕಕ್ಕೆ ಎಷ್ಟು ಹಣ ಬಿಡುಗಡೆಯಾಗಿದೆ ಲೆಕ್ಕ ತರಿಸುತ್ತೇನೆ.1965 ರಿಂದ ಉತ್ತರ ಕರ್ನಾಟಕಕ್ಕೆ ಬಿಡುಗಡೆಯಾದ ಹಣದ ಬಗ್ಗೆ ಶ್ವೇತ ಪತ್ರ ಹೊರಡಿಸಿಲು ಮುಖ್ಯಮಂತ್ರಿಗಳಿಗೆ ಹೇಳುತ್ತೇನೆ ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ರು.

ಕುಮಾರಸ್ವಾಮಿ ಇದನ್ನು ತೆಗೆದುಕೊಂಡ ವಿಧಾನಸಭೆಯಲ್ಲಿ ಚರ್ಚೆ ಮಾಡಿ ರಾಜ್ಯದ ಜನರ ಮುಂದೆ ಇಡಲಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದ್ದಾರೆ ಜೊತೆಗೆ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ.ಮೋದಿಯವರ ಆಡಳಿತಕ್ಕೆ ಇನ್ನೂ ಆರು ತಿಂಗಳ ಬಾಕಿ ಇದೆ ಕಾದು ನೋಡೋಣ ದೇಶದ ಜನರೆ ಉತ್ತರ ಕೊಡುತ್ತಾರೆ ಎಂದು ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ ಹೇಳಿದರು.

- Call for authors -

LEAVE A REPLY

Please enter your comment!
Please enter your name here