ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾ: ಸರ್ಜಾ ಪ್ಯಾಮಿಲಿಯಲ್ಲಿ ಮನೆ ಮಾಡಿದ ಸಂತಸ

0
0

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜ್ಯೂ ಚಿರು ಆಗಮನದಿಂದಾಗಿ ಸರ್ಜಾ ಫ್ಯಾಮಿಲಿ, ಸ್ನೇಹಿತರು, ಕನ್ನಡ ಚಿತ್ರರಂಗ, ಹಾಗು ಚಿರು ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ..

ಚಿರು ಕಳೆದುಕೊಂಡು ಇಂದಿಗೆ 137 ದಿನಗಳು ಕಳೆದೋಗಿದೆ. ಚಿರು ಅಗಲಿದಾಗ ಮೇಘನಾ ರಾಜ್ 5 ತಿಂಗಳ ಗರ್ಭಿಣಿ ಆಗಿದ್ರು. ಅಂದಿನಿಂದಲೂ ಚಿರುನ ಸ್ಮರಣೆಯಲಿದ್ದ ಮೇಘನಾ ರಾಜ್ ಹಾಗು ಸರ್ಜಾ ಕುಟುಂಬ, ಮತ್ತೆ ಚಿರು ಬಂದೇ ಬರ್ತಾನೆ, ಮಗುವಿನ ರೂಪದಲ್ಲಿ ಮತ್ತೆ ನಮ್ಮನ್ನೇಲ್ಲಾ ಸೇರ್ತಾನೆ ಅಂತಾ ಭರವಸೆಯಲ್ಲಿದ್ರು. ಅದರಂತೆ ಆಗಿದ್ದು, ಎಲ್ಲರ ಮೊಗದಲ್ಲೂ ಸಂಭ್ರಮ ತುಂಬಿದೆ..

ಮೂರು ತಿಂಗಳ ಹಿಂದೆನೆ ಆಸ್ಪತ್ರೆಯ ರೂಮ್ ಬುಕ್ ಮಾಡಿದ್ದ ಚಿರು ಫ್ಯಾಮಿಲಿ, ಕಂಪ್ಲೀಟ್ ಆ ರೂಮ್ ಅನ್ನ ಚಿರು ಹಾಗು ಮೇಗನಾ ರಾಜ್ ಫೋಟೋ ಗಳಿಂದ ಅಲಂಕರಿಸಿದ್ರು. ನೆನ್ನೆ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದ ಮೇಘನಾ ರಾಜ್ ಗುರುವಾರ 11 ಗಂಟೆ 7 ನಿಮಿಷಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ರು..

ಮೇಘನಾ ರಾಜ್ ಆಸ್ಪತ್ರಗೆ ದಾಖಲಾಗಿದ್ದು ಗೊತ್ತಾಗ್ತಿದ್ದ ಹಾಗೆ ನೂರಾರು ಚಿರು ಅಭಿಮಾನಿಗಳು ಆಸ್ಪತ್ರೆ ಮುಂದೆ ಜಮಾಯಿಸಿದ್ರು. ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನಿಡ್ತಿದ್ದಾಗೆ, ಚಿರು ಫ್ಯಾನ್ಸ್ ಆಸ್ಪತ್ರೆಯ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ರು. ಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ಇನ್ನೇರಡು ದಿನಗಳ ನಂತ್ರ ಆಸ್ಪತ್ರೆಯಿಂದ ಮನೆಗೆ ಹೋಗಲಿದ್ದಾರೆ.

- Call for authors -

LEAVE A REPLY

Please enter your comment!
Please enter your name here