ಕೋಲಾರದಲ್ಲಿ ವಿವಾದ ಹುಟ್ಟುಹಾಕಿದ ಏಸು ಶಿಲುಬೆ..!

0
3

ಕೋಲಾರ:  ರಾಮನಗರದ ಕಪಾಲಿ ಬೆಟ್ಟವನ್ನ ಕ್ರೈಸ್ತ ಮಿಷನರಿಗಳು ಕಬಳಿಸಿದ್ದಾರೆ ಅನ್ನೋ ಆರೋಪ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಕೋಲಾರದ ದಕ್ಷಿಣಗಿರಿ ಬೆಟ್ಟದಲ್ಲಿರೋ ಏಸು ಶಿಲುಬೆ, ಚರ್ಚ್ ಹಲವು ವರ್ಷಗಳ ಬಳಿಕ ವಿವಾದಕ್ಕೆ ಕಾರಣವಾಗಿದೆ. ಆ ಜಾಗದಲ್ಲಿ ಸರ್ಕಾರಿ ಜಾಗ ಒತ್ತುವರಿ, ಮತಾಂತರ ನಡೆಯುತ್ತಿದೆ ಅನ್ನೋ ಆರೋಪ ಹಿಂದುಪರ ಸಂಘಟನೆಗಳಿಂದ ಕೇಳಿ ಬಂದಿದೆ. ಆದರೆ, ವಿವಾದವೂ ಇಲ್ಲ, ಮತಾಂತರವೂ ನಡೆದಿಲ್ಲ ಅಂತಾರೆ ಗ್ರಾಮಸ್ಥರು ಹಾಗೂ ತಾಲ್ಲೂಕು ಆಡಳಿತ.

ಕೋಲಾರ ಜಿಲ್ಲೆಯ, ಮುಳಬಾಗಿಲು ತಾಲೂಕಿನ, ಗೋಕುಂಟೆ ಗ್ರಾಮದಲ್ಲಿ ಗ್ರಾಮಕ್ಕೆ ಹೊಂದಿಕೊಂಡಿರುವ ನಾಚಹಳ್ಳಿಯ ಸರ್ವೇ ನಂಬರ್ 168 ರಲ್ಲಿ 300 ಎಕರೆ ಸರ್ಕಾರಿ ಗೋಮಾಳ ಮತ್ತು ಬೆಟ್ಟ ಗುಡ್ಡಗಳನ್ನ ಕ್ರೈಸ್ತ ಮಿಷನರಿಗಳು ಅಕ್ರಮವಾಗಿ ಕಬಳಿಸಿಕೊಂಡು ಏಸುವಿನ ಶಿಲುಭೆ ಹಾಗೂ ಚರ್ಚ್‌ಗಳನ್ನು ನಿರ್ಮಾಣ ಹಾಗೂ ಗಡಿಭಾಗದಲ್ಲಿರೋ ಅಮಾಯಕರನ್ನ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡ್ತಾಯಿದ್ದಾರೆ ಅನ್ನೋ ಆರೋಪಗಳು ಕೇಳಿ ಬಂದಿವೆ.

ಗೋಕುಂಟೆ ಗ್ರಾಮದಲ್ಲಿ ಎರಡು ಶತಮಾನಗಳಿಂದ ಕ್ರೈಸ್ತ ಧರ್ಮದವ್ರು ನೆಲೆಸಿದ್ದಾರೆ. ಇಲ್ಲಿ ಯಾವುದೇ ಕ್ರೈಸ್ತ ಮಿಷನರಿಗಳು ಬಲವಂತವಾಗಿಯೂ ಅಥವಾ ಆಮಿಷಗಳನ್ನೊಡ್ಡಿ ಮತಾಂತರ ಮಾಡಿಲ್ಲ. ಗ್ರಾಮದಲ್ಲಿರೋ ಹಿಂದುಗಳು ಹಾಗೂ ಕ್ರೈಸ್ತರು ಸಹಮತದಿಂದ ಬಾಳಿ ಬದುಕುತ್ತಿದ್ದಾರೆ. ಯಾರೋ ಮೂರನೇ ವ್ಯಕ್ತಿಗಳು ಸ್ಥಳಕ್ಕೆ ಬಂದು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟು ಇಷ್ಟೆಲ್ಲಾ ವಿವಾದ ಸೃಷ್ಠಿ ಮಾಡಿದ್ದಾರೆ. ಏಸುವಿನ ಶಿಲಭೆ ಹಾಗೂ ಚರ್ಚ್ ಸ್ಥಾಪನೆ ಮಾಡಿ ಸುಮಾರು ಇಪತ್ತು ವರ್ಷಗಳೇ ಕಳೆದಿದೆ. ಅಂದಿನಿಂದ ಇಲ್ಲಿ ಪ್ರತಿನಿತ್ಯ ಪೂಜೆ ಪ್ರಾರ್ಥನೆ ಮಾಡುತ್ತಿದ್ದೇವೆ ಅಂತಾರೆ ಗ್ರಾಮಸ್ಥರು.

ಕ್ರೈಸ್ತ ಮಿಷನರಿಗಳ ಜೊತೆ ಅಧಿಕಾರಿಗಳೇ ಶಾಮೀಲಾಗಿ ಸರ್ಕಾರಿ ಜಮೀನನ್ನ ಕಬಳಿಸಿ ಏಸುವಿನ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಮುಳಬಾಗಿಲು ತಾಲೂಕಿನಲ್ಲಿ ಕ್ರೈಸ್ತ ಮಿಷನರಿಗಳ ಚಟುವಟಿಕೆಗಳನ್ನ ಬ್ಯಾನ್ ಮಾಡುವಂತೆ ಒತ್ತಾಯಿಸಿ ಹಿಂದೂ ಜಾಗರಣೆ ವೇದಿಕೆ ಕಾರ್ಯಕರ್ತರು ಮುಳಬಾಗಲಿನಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಗೋಕುಂಟೆ ಗ್ರಾಮದಲ್ಲಿರೋ ಬೆಟ್ಟ, ಗೋಮಾಳ ಜಮೀನನ್ನ ಸರ್ಕಾರ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ವಿವಾದ ಸೃಷ್ಠಿಯಾಗುತ್ತಿದ್ದಂತೆ ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಯಾವುದೇ ರೀತಿಯ ಮತಾಂತರ ನಡೆದಿಲ್ಲ. ಶಿಲುಭೆ ನಿರ್ಮಾಣ ಮಾಡಿರುವ ಬೆಟ್ಟ ಹಾಗೂ ಜಮೀನು ಸರ್ಕಾರಕ್ಕೆ ಸೇರಿದ್ದು. ಆದರೆ, 20 ವರ್ಷಗಳ ಹಿಂದೆಯೇ ಗೋಕುಂಟೆ ಗ್ರಾಮದ ಸರ್ವೆ ನಂಬರ್ 58ರಲ್ಲಿ 4 ಎಕೆರೆ ಸರ್ಕಾರಿ ಜಮೀನನ್ನ ಕ್ರೈಸ್ತ ಮೀಷನರಿಗೆ ಮಂಜೂರು ಮಾಡಲಾಗಿದೆ. ತದ ನಂತರ ಖಾತೆ ಮಾಡಿಸಿಕೊಂಡು, ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆದುಕೊಂಡು ಏಸುವಿನ ಶಿಲುಭೆ ಹಾಗೂ ಚರ್ಚ್ ನಿರ್ಮಾಣ ಮಾಡಿದ್ದಾರೆ ಅಂತಾರೆ ಅಧಿಕಾರಿಗಳು.

- Call for authors -

LEAVE A REPLY

Please enter your comment!
Please enter your name here