ಸಂಸದರಿಗೆ ಐಫೋನ್ ಕೊಟ್ಟಿದ್ದು ನಾನೇ: ಡಿಕೆಶಿ

0
168

ಬೆಂಗಳೂರು: ರಾಜ್ಯದ ಸಂಸದರಿಗೆ ವೈಯಕ್ತಿಕವಾಗಿ ಐಫೋನ್ ಉಡುಗೊರೆ ನೀಡಿದ್ದೇನೆ,ಸರಕಾರಕ್ಕೂ ಐಫೋನ್ ಗಿಫ್ಟ್ ಗೂ ಯಾವುದೇ ಸಂಬಂಧವಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಬ್ಯಾಗ್ ಮಾತ್ರ ಸರಕಾರದಿಂದ ನಾವು ನೀಡಿದ್ದು, ಆಪಲ್ ಐ ಫೋನ್ ಅನ್ನು ನಾನೇ ವೈಯ್ಯಕ್ತಿಕವಾಗಿ ಕೊಟ್ಟಿದ್ದೇನೆ.ಒಳ್ಳೆಯ ಉದ್ದೇಶದಿಂದ ರಾಜ್ಯದ ಸಂಸದರಿಗೆ ಐಫೋನ್ ಮತ್ತು ಬ್ಯಾಗನ್ನು ನೀಡಿದ್ದೇವೆ. ಮಾಹಿತಿಗಳು ತ್ವರಿತವಾಗಿ ಸಂಸದರಿಗೆ ತಲುಪಲಿ ಎಂದು 50 ಸಾವಿರದ ಐ ಫೋನ್ ನೀಡಿದ್ದೇನೆ. ನಾನೇ ಐ ಫೋನ್ ನೀಡಿದ್ದೇನೆ. ಅದರಲ್ಲೇನು ತಪ್ಪಿದೆ ಎಂದು‌ ಗಿಫ್ಟ್ ನೀಡಿದ್ದನ್ನು ಸಮರ್ಥಿಸಿಕೊಂಡ್ರು.

ಒಳ್ಳೆಯ ಹೃದಯವಂತಿಕೆಯಿಂದ ಐಫೋನ್ ನೀಡಿದ್ದೇನೆ. ಕಾಮಲೆ ಕಣ್ಣಿಗೆ ಎಲ್ಲವೂ ಹಳದಿಯಂತೆ ಎಲ್ಲವೂ ತಪ್ಪಾಗಿ ಕಾಣಿಸುತ್ತದೆ.ಫೋನ್ ಗಿಫ್ಟ್ ಕೊಟ್ಟ ನಂತರ ಅದರಲ್ಲಿ ಕೆಲವರು ವಾಪಾಸು ಕೊಟ್ಟಿದ್ದಾರೆ. ಅದಕ್ಕೆ ನಾನು ಏನು ಮಾಡಲಿ? ಕಳೆದ ವರ್ಷವೂ ಐ ಫೋನ್ ಕೊಟ್ಟಿದ್ದೇನೆ. ಐ ಫೋನ್ ಪಡೆದ ಹಲವು ಬಿಜೆಪಿ ಸಂಸದರು ನನಗೆ ಕರೆ ಮಾಡಿ‌ ಕೃತಜ್ಞತೆ ಸಲ್ಲಿಸಿದ್ದಾರೆ. ರಾಜೀವ್ ಚಂದ್ರಶೇಖರ್ ಹಣವಂತರು. ಹೀಗಾಗಿ‌ ಐಫೋನ್ ಗಿಪ್ಟ್ ಅನ್ನು ಮರಳಿಸಿದ್ದಾರೆ. ಬೇರೆಯವರು ಅವರಂತೆ ಶ್ರೀಮಂತರಿಲ್ಲ ಎಂದು ಸಚಿವ ಡಿಕೆಶಿ ಟಾಂಗ್ ನೀಡಿದ್ರು.

ಬಿಜೆಪಿಯವರೂ ಕೂಡ ದೆಹಲಿಗೆ ಹೋದಾಗ ಫೋನು,ವಾಚು ಗಿಫ್ಟ್ ನೀಡ್ತಾರೆ,ಅದರಂತೆ ನಾವು ನೀಡಿದ್ದರಲ್ಲಿ ತಪ್ಪೇನಿದೆ ಅಂತಾ ಸಮರ್ಥಿಸಿಕೊಂಡ್ರು.

- Call for authors -

LEAVE A REPLY

Please enter your comment!
Please enter your name here