ಮಗ ಡಿಸಿಯಾದರೂ ಪೌರ ಕಾರ್ಮಿಕ ವೃತ್ತಿ ತೊರೆಯದೇ ನಿವೃತ್ತಿಯಾದ ತಾಯಿ

0
100

ಜಾರ್ಖಂಡ್:ಓರ್ವ ಮಗ ಡಿಸಿ ಮತ್ತೋರ್ವ ರೈಲ್ವೆ ಇಂಜಿನಿಯರ್ ಇನ್ನೊಬ್ಬ ಸರಕಾರಿ ಆಸ್ಪತ್ರೆ ವೈದ್ಯ ಆದ್ರೂ ತಾಯಿ ಪೌರಕಾರ್ಮಿಕರು.ಮಕ್ಕಳು ಉನ್ನತ ಹುದ್ದೆಗೇರಿದರೂ ಬೀದಿಗಳ ಕಸ ಗುಡಿಸುತ್ತಲೇ ನಿವೃತ್ತಿಯಾಗಿ ಇವರು ಮಾದರಿಯಾಗಿದ್ದಾರೆ.

ಜಾರ್ಖಂಡ್ ನ ರಾಜ್ರಪ್ ನಗರದ ಸಿಸಿಎಲ್ ಕಾಲನಿಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ಕಸಗೂಡಿಸಿದ ಪೌರಕಾರ್ಮಿಕರಾದ ಸುಮಿತ್ರಾದೇವಿ ನಿವೃತ್ತಿಯಾಗುತ್ತಿದ್ದು,
ನಗರಸಭೆ ಸಿಬ್ಬಂದಿ,ನೆರೆಹೊರೆಯವರಿಂದ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು.ಚಿಕ್ಕ‌ಸಮಾರಂಭವನ್ನು ನಡೆಸಲಾಯ್ತು.ಈಕೆಗೊಂದು ಖುರ್ಚಿ.ಆಜೂ ಬಾಜೂ ನೆರೆಹೊರೆಯವರು‌ ಅಷ್ಟೇ.

ಅಷ್ಟರಲ್ಲಿ ಸಮಾರಂಭದ ಸ್ಥಳಕ್ಕೆ ನೀಲಿ ದೀಪದ ಕಾರು ಬರುತ್ತದೆ.ಜಿಲ್ಲಾಧಿಕಾರಿ ಮಹೇಂದ್ರಕುಮಾರ ಕೆಳಗಿಳಿದು ಬರುತ್ತಾರೆ.ಸುಮಿತ್ರಾದೇವಿಯ ಪಾದಗಳಿಗೆ ಹಣೆಹಚ್ಚಿ ನಮಸ್ಕರಿಸುತ್ತಾರೆ.ಅವರ ಹಿಂದೆ ಹಿಂದೆಯೇ ಮತ್ತೆರಡು ಕಾರುಗಳು ಬರುತ್ತವೆ.ರೇಲ್ವೆ ಇಂಜನಿಯರ್ ವಿರೇಂದ್ರಕುಮಾರ ಮತ್ತು ಸರಕಾರಿ ವೈದ್ಯ ಧಿರೇಂದ್ರಕುಮಾರ ವೇದಿಕೆಯಡಿ ಬರುತ್ತಾರೆ.ಅವರೂ ಸುಮಿತ್ರಾದೇವಿಯ ಪಾದಗಳಿಗೆ ನಮಸ್ಕರಿಸುತ್ತಾರೆ.ಸುಮಿತ್ರಾದೇವಿಯ ಬಾಯಿಂದ ಮಾತೇ ಹೊರಡುವದಿಲ್ಲ.ಗಳಗಳನೇ ಅಳಲು ಆರಂಭಿಸುತ್ತಾಳೆ.ಸುತ್ತಲಿನ ಜನರಿಗೆ ಅಚ್ಚರಿಯೋ ಅಚ್ಚರಿ. ಉನ್ನತ ಹುದ್ದೆ ಅಧಿಕಾರಿಗಳು ಯಾಕೆ ಬಂದ್ರು,ಯಾಕೆ ಕಾಲಿನ ನಮಸ್ಕರಿಸಿದ್ರು ಅಂತಾ ಗೊಂದಲ.

ಅಗಲೇ ಸುಮಿತ್ರಾದೇವಿಯವರ ಆದರ್ಶ ಎಂತದ್ದು ಎಂದು ಗೊತ್ತಾಗಿದ್ದು.ಪೌರಕಾರ್ಮಿಕಳಾಗಿ ಸೇವೆ ಸಲ್ಲಿಸುತ್ತಲೇ ಮೂವರೂ ಪುತ್ರರನ್ನು ಚೆನ್ನಾಗಿ ಓದಿಸಿ ದೊಡ್ಡ ಅಧಿಕಾರಿಗಳನ್ನಾಗಿ ಮಾಡಿದವಳು ಸುಮಿತ್ರಾದೇವಿ.ದೊಡ್ಡ ಮಗ ವಿರೇಂದ್ರಕುಮಾರ ರೇಲ್ವೆ ಇಂಜನಿಯರ್,ಎರಡನೇ ಮಗ ಧಿರೇಂದ್ರಕುಮಾರ ಸರಕಾರಿ ವೈದ್ಯ ಹಾಗೂ ಮೂರನೇ ಮಗ ಮಹೇಂದ್ರಕುಮಾರ ಬಿಹಾರದ ಸಿವಾನ್ ಜಿಲ್ಲೆಯ ಜಿಲ್ಲಾಧಿಕಾರಿ.ಐ ಎ ಎಸ್ ಅಧಿಕಾರಿ‌ ಎನ್ನುವುದ ತಿಳಿದ ನೆರೆಹೊರೆಯ ಜನರು ಕ್ಷಣ ಕಾಲ ತಬ್ಬಿಬ್ಬಾದರು.

ನಂತರ ಸಾವರಿಸಿಕೊಂಡು,ತನ್ನ ಮೇಲಾಧಿಕಾರಿಗಳತ್ತ ಮುಖ ಮಾಡಿ ಮಾತಾಡಿದ ಸುಮಿತ್ರಾ ದೇವಿ, ಸಾಹೇಬರೇ,30 ವರ್ಷದಿಂದ ಈ ಕಾಲನಿಯ ಬೀದಿಗಳ ಕಸಗೂಡಿಸಿದ್ದೇನೆ.ಆದರೆ ನನ್ನ ಮಕ್ಕಳೂ ನಿಮ್ಮಂತೆಯೇ ಸಾಹೇಬರಾಗಿದ್ದಾರೆ ಎಂದಳು. ಮುಗ್ಧ ಹೃದಯದ ಮನದಾಳದ ಮಾತುಗಳು ಹೊರಬರುತ್ತಿದ್ದಂತೆ ಸುತ್ತಲಿದ್ದವರ ಕಣ್ಣುಗಳು ಒದ್ದೆಯಾದವು.

ಮಗ ಜಿಲ್ಲಾ ಕಲೆಕ್ಟರ್,ಮತ್ತೊಬ್ಬ ರೈಲ್ವೆ ಇಂಜಿನಿಯರ್,ಇನ್ನೊಬ್ಬ ಡಾಕ್ಟರ್ ಆದರೂ ನಾನು ನನ್ನ ವೃತ್ತಿಯನ್ನು ಬಿಡಲಿಲ್ಲ. ಇದರಿಂದಲೇ ನನ್ನ ಕನಸುಗಳು ನನಸಾಗಿರುವಾಗ ನಾನೇಕೆ ಈ ವೃತ್ತಿ ಬಿಡಬೇಕು ಎಂದಳು ಭಾವುಕಳಾದಳು. ಮಕ್ಕಳ ಭವಿಷ್ಯ ರೂಪಿಸಲು ವೃತ್ತಿ ಮುಖ್ಯವಲ್ಲ,ಇಚ್ಛಾಶಕ್ತಿ,ಬದ್ದತೆ ಮುಖ್ಯ ಎನ್ನುವ ಸಂದೇಶ ನೀಡಿದ್ರು.

ಡಿಸಿ ಮಹೇಂದ್ರಕುಮಾರ್ ಮಾತನಾಡಿ, ನಮ್ಮ ತಾಯಿ ನಮಗಾಗಿ ಬಹಳಷ್ಟು ತ್ಯಾಗ ಮಾಡಿದ್ದಾಳೆ.ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಜೀವನದಲ್ಲಿ ಯಾವದೇ ಉದ್ಯೋಗದಲ್ಲೂ ಯಶಸ್ಸನ್ನು ಸಾಧಿಸಬಹುದು ಇದಕ್ಕೆ ನನ್ನ ತಾಯಿಯೇ ಸಾಕ್ಷಿ ಎಂದ್ರು.

- Call for authors -

LEAVE A REPLY

Please enter your comment!
Please enter your name here