ಸಾಲಮನ್ನಾ,ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಜಾರಿ: ರಾಜ್ಯಪಾಲರ ಸುಳಿವು

0
164

ಬೆಂಗಳೂರು:ಅನ್ನದಾತನ ಬದುಕನ್ನ ಹಸನುಗೊಳಿಸಲು ನಮ್ಮ ಸರ್ಕಾರ ಮಾನವೀಯ ಚೌಕಟ್ಟಿನಲ್ಲಿ‌ ನಿರ್ಧಾರ ಕೈಗೊಳ್ಳಲಿದೆ.ಹಿಂದಿನ ಯೋಜನೆಗಳ ಜೊತೆಗೆ ನಾಡಿನ ಜನತೆಯ ಹಿತ ಕಾಪಾಡಲಿದೆ ಎನ್ನುವ ಮೂಲಕ ಸಾಲಮನ್ನಾ ಹಾಗು ಮೈತ್ರಿ ಪಕ್ಷಗಳ ಸಾಮಾನ್ಯ ಕನಿಷ್ಠ ಯೋಜನೆಗಳ ಜಾರಿ ಕುರಿತು ರಾಜ್ಯಪಾಲ ವಜುಭಾಯ್ ವಾಲಾ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಸುಳಿವು ನೀಡಿದರು.

ವಿಧಾನ ಮಂಡಲ ಉಭಯ ಸದನವನ್ನುದ್ದೇಶಿಸಿ ಭಾಷಣ ಮಾಡಿದ ಅವರು,ಎಲ್ಲ ವರ್ಗದ ಅವಕಾಶ ವಂಚಿತರ ಕಲ್ಯಾಣಕ್ಕೆ ನಮ್ಮ‌ ಸರ್ಕಾರ ಬದ್ಧವಾಗಿದೆ ಎನ್ನುವ ಅಭಯದೊಂದಿಗೆ ರಾಜ್ಯ ಸರ್ಕಾರವನ್ನು ಸಮರ್ಥಿಸಿಕೊಂಡರು.

ಹಳ್ಳಿ ಪಟ್ಟಣಗಳ ಸಮಗ್ರ ಅಭಿವೃದ್ಧಿಗೆ ಸರಿ ಸಮನಾದ ಯೋಜನೆ ರೂಪಿಸಲಾಗುವುದು.ರೈತರ ರಕ್ಷಣೆಗೆ ನಮ್ಮ ಸರ್ಕಾರ ಸದಾ ಚಿಂತಿಸುತ್ತದೆ.ರೈತರನ್ನು ಆಧುನಿಕ ಕೃಷಿ ತಂತ್ರಜ್ಞಾನದ ಬಳಕೆಗೆ ಅಣಿಗೊಳಿಸಲಿದೆ.ಶಿಕ್ಷಣದಲ್ಲಿ ವೃತ್ತಿ ಕೌಶಲ್ಯ ಅಳವಡಿಸಿ ಉದ್ಯೋಗ ಸೃಷ್ಟಿ.ಶಿಕ್ಷಣದಲ್ಲಿ ಕೌಶಲ್ಯ ಸಹಿತ ವೃತ್ತಿ ತರಬೇತಿ ಕಡ್ಡಾಯ.ರೈತರು ನೀರಿನ ಲಭ್ಯತೆ ಆಧರಿಸಿ ಬೆಳೆ ಬೆಳೆಯಬೇಕು.ಅತಿವೃಷ್ಠಿ, ಅನಾವೃಷ್ಟಿಯಿಂದ ರೈತನ ಬೆಳೆಗೆ ನ್ಯಾಯಯುತ ಬೆಲೆ ಇಲ್ಲ.ಹೀಗಾಗಿ ರೈತರ ಬಾಳಿನಲ್ಲಿ ಬೆಳಕು‌ ಮೂಡಿಸಲಿ ಹೊಸ ಯೋಜನೆ ಜಾರಿಗೆ ಚಿಂತನೆ.ರಾಜ್ಯದ ರೈತರು ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು.ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ರೈತರಿಗೆ ಸಲಹೆ.ದೇಶದಲ್ಲೇ ಮೊದಲ ಬಾರಿ ರೈತರಿಗೆ ನ್ಯಾಯಯುತ ಬೆಲೆ ನಿಗದಿ ಮಾದರಿಯ ಪ್ರಾಯೋಗಿಕ ಯೋಜನೆ ಕರ್ನಾಟಕದಲ್ಲಿ ಜಾರಿಗೆ ಚಿಂತನೆ.ರೈತರು ಆತ್ಮಹತ್ಯೆಗೆ ಶರಣಾಗಬಾರದು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ನಮ್ಮ ಸರ್ಕಾರ ತೃಪ್ತಿಕರ ಜಾನೂನು ಸುವ್ಯವಸ್ಥೆ ಕಾಯ್ದುಕೊಂಡಿದೆ.ಮುಂದಿನ ಸಾಲಿನಿಂದ ಪೊಲೀಸ್ ಭದ್ರತೆ ತರಬೇತಿ ಸಾಮರ್ಥ್ಯ ಹೆಚ್ಚಳ.ಸೈಬರ್ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ.ಪೊಲೀಸ್ ಆಯುಕ್ತರ ಕಚೇರಿಗಳಲ್ಲಿ ನಿರ್ಭಯ ಕೇಂದ್ರಗಳನ್ನು‌ ಸ್ಥಾಪನೆ.ಹೈದ್ರಾಬಾದ್ ಕರ್ನಾಟಕದ ವ್ಯಕ್ತಿಗಳಿಗೆ ವಿವಿಧ ಪ್ರವರ್ಗದ ಹುದ್ದೆಗಳಿಗೆ ಮೀಸಲಾತಿ.ನಾಡಕಚೇರಿ, ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಡಿಜಿ ಲಾಕರ್ ಗಳ ಅಳವಡಿಕೆ.ಕರ್ನಾಟಕ ಹಾಲಿನ ಸಂಗ್ರಹಣೆಯಲ್ಲಿ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ.ಮೊಟ್ಟೆಗಳ ಉತ್ಪಾದನೆಯಲ್ಲಿ 7 ನೇ ಸ್ಥಾನದಲ್ಲಿದೆ.ಮಾಂಸ ಉತ್ಪಾದನೆಯಲ್ಲಿ 11 ಸ್ಥಾನದಲ್ಲಿದೆ.ರಾಜ್ಯ ಸರ್ಕಾರ ರಾಜ್ಯ ಮೇವು ಭದ್ರತಾ ನೀತಿ ಜಾರಿಗೆ ತರಲಿದೆ ಎಂದರು.

ಕೆರೆ ತುಂಬುವ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುತ್ತದೆ.ಹುಲಿ, ಆನೆ, ಚಿರತೆ ಸಿಂಗಲೀಕಗಳ ಸಂಖ್ಯೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಪರಿಶೀಲನೆ ಕೇಂದ್ರ ಸ್ಥಾಪಿಸಿದೆ.ಎಸ್ಸಿ, ಎಸ್ಟಿ ನಿರುದ್ಯೋಗಿ ಯುವಕ ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಭೇತಿ.ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಎಸ್ಸಿ, ಎಸ್ಟಿ ನಿರುದ್ಯೋಗಿಗಳಿಗೆ ಪೂರ್ವಭಾವಿ ತರಬೇತಿ ನೀಡಲಾಗುತ್ತದೆ ಎಂದರು.

2021 ಮಾರ್ಚ್ ಹೊತ್ತಿಗೆ ನಮ್ಮ ಮೆಟ್ರೋ 118 ಕಿ ಮೀ ಮಾರ್ಗ ಪೂರ್ಣ ಮೈಸೂರು ಮಾದರಿಯಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಸೈಕಲ್ ಕಾರ್ಯಕ್ರಮ ಜಾರಿ ಬೆಂಗಳೂರಿನಲ್ಲಿ ಸಮರ್ಥ ಸಾರಿಗೆ ವ್ಯವಸ್ಥೆ ಜಾರಿಗೆ ಯೋಚನೆ ಬಸ್ ಪ್ರಯಾಣಿಕರಿಗೆ ಉಚಿತ ವೈ ಫೈ ಸೌಲಭ್ಯ ಮಹಿಳಾ ಪ್ರಯಾಣಿಕರ ಸುರಕ್ಷಿತೆಗಾಗಿ ಬಸ್ ಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗುತ್ತದೆ ಎಂದರು.

ಐಟಿ- ಬಿಟಿಯಲ್ಲಿ ಕರ್ನಾಟಕ ನಾಯಕತ್ವ ವಹಿಸಿಕೊಂಡಿದೆ ಬೆಂಗಳೂರು ಡಿಜಿಟಲ್ ನಗರ ಎನಿಸಿದೆ ಐಟಿ ರಫ್ತು 3 ಲಕ್ಷ ಕೋಟಿ ದಾಟಿದೆ ದೇಶದ ಜೈವಿಕ ತಂತ್ರಜ್ಞಾನ ಉದ್ಯಮಕ್ಕೆ ಶೇ. ೩೫ ರಷ್ಟು ಕೊಡುಗೆ ನೀಡಿದೆ ಕರ್ನಾಟಕ 7000 ನವೋದ್ಯಮ ಸ್ಥಾಪಿಸಿದೆ ಬೆಂಗಳೂರು ನವೋದ್ಯಮದ ರಾಜಧಾನಿ ಎನಿಸಿದೆ ಉದ್ದೇಶಿತ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಕರ್ನಾಟಕ ಆರ್ಥಿಕ ಸ್ಥಿತಿಯನ್ನು ದಕ್ಷತೆಯಿಂದ ನಿರ್ವಹಿಸುತ್ತಿದೆ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ವಿತ್ತಿಯ ಕ್ರೋಢೀಕರಣ ನಕ್ಷೆ ರೂಪಿಸುವಲ್ಲಿ ನನ್ನ ಸರ್ಕಾರ ಮುಂಚೂಣಿಯಲ್ಲಿದೆ ಎಂದರು.

ಕರ್ನಾಟಕ ದೇಶದಲ್ಲಿ ಮಾದರಿ ರಾಜ್ಯ‌ ಹಲವು ಪ್ರಗತಿಪರ ಯೋಜನೆಗಳಿಂದಾಗಿ ಮಾದರಿ ಎನಿಸಿದೆ ವಿಧಾನ ಪರಿಷತ್ ಸದಸ್ಯರು ರಾಜ್ಯದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ
ರಾಜ್ಯದ ಯೋಜನೆಗಳನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುವ ಅಗತ್ಯವಿದೆ ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ ಎಂದು ರಾಜ್ಯಪಾಲರ ವಿ ಆರ್ ವಾಲಾ ಭಾಷಣ ಮುಗಿಸಿದರು.

- Call for authors -

LEAVE A REPLY

Please enter your comment!
Please enter your name here