ತುಮಕೂರು: ಬಾಲಿವುಡ್ ನಟಿ ಕಂಗನಾ ರಾಣವತ್ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಕೋರ್ಟ್ ನಿರ್ದೇಶನ ನೀಡಿದೆ.
ತುಮಕೂರಿನ ಕ್ಯಾತ್ಸಂದ್ರ ಪೊಲೀಸರಿಗೆ ಎಫ್ ಐ ಆರ್ ದಾಖಲಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಕಳೆದ ಸೆಪ್ಟೆಂಬರ್ 25 ರಂದು ಹೈಕೋರ್ಟ್ ವಕೀಲ, ತುಮಕೂರು ನಿವಾಸಿ ರಮೇಶ್ ನಾಯಕ್ ಕಂಗನಾ ರಾಣವತ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು.
ಕಂಗನಾ ರಾಣವತ್ ರೈತರನ್ನ ಟೆರರಿಸ್ಟ್ ಎಂದು ಕರೆದಿದ್ದಾರೆ. ರೈತರನ್ನ ನಿಂಧಿಸಿದ್ದಾರೆಂದು ಆರೋಪಿಸಿ ಕೋರ್ಟ್ ಗೆ ದೂರು ನೀಡಿದ್ದರು. ಇದೀಗ ದೂರಿನ ವಿಚಾರಣೆ ನಡೆಸಿರೋ ತುಮಕೂರು ಜೆಎಂಎಫ್ಸಿ ನ್ಯಾಯಾಲಯ ನಟಿ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.