ಬೀದಿಗೆ ಬಿದ್ದ ಅಗ್ನಿಸಾಕ್ಷಿ ಅಖಿಲ್ ಸಂಸಾರ!

0
58

ಬೆಂಗಳೂರು: ಅಗ್ನಿಸಾಕ್ಷಿ ಧಾರವಾಹಿಯ ನಟ ರಾಜೇಶ್ ಧ್ರುವ ಸಂಸಾರದ ಕಿತ್ತಾಟ ಸದ್ಯಕ್ಕೆ ಮುಗಿಯೋ ಯಾವುದೇ ಲಕ್ಷಣಗಳು ಕಾಣ್ತಿಲ್ಲ. ಗಂಡ ಹೆಂಡತಿ ಜಗಳ ಬಿದ್ದಿಗೆ ಬಂದಿದ್ದು ಇದೀಗ ಜನಗಳ ಬಾಯಿಗೆ ಆಹಾರವಾಗಿದೆ.

ಅಗ್ನಿಸಾಕ್ಷಿಯ ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವ ಹಾಗೂ ಶೃತಿ ಹಾವು ಮುಂಗುಸಿಗಳ ಹಾಗೆ ಕಿತ್ತಾಡ್ತಿದ್ದಾರೆ. ಇಷ್ಟು ದಿನಗಳ ಕಾಲ ನಾಲ್ಕು ಗೋಡೆಗಳ ಮಧ್ಯೆ ಇದ್ದ ಜಗಳ ಬೀದಿಗೆ ಬಂದು ನಿಂತಿದೆ. ಲವ್ ಮಾಡಿ, ಲಿವಿಂಗ್ ಟುಗೇದರ್ ನಲ್ಲಿದ್ದು, ಮದುವೆಯಾದ ನಟ ರಾಜೇಶ್ ಹಾಗೂ ಶೃತಿ ಬಾಳಲ್ಲಿ ಬಿರುಗಾಳಿ ಎದಿದ್ದೆ.

ಗಂಡನ ವಿರುದ್ಧ ಹೆಂಡತಿ ಸ್ಟೇಷನ್ ಮೆಟ್ಟಿಲು ಹತ್ತಿದ್ರೆ, ಹೆಂಡತಿ ವಿರುದ್ಧ ಗಂಡ ಸಾಕ್ಷಿ ತಂದು ಕೊಟ್ಟಿದ್ದಾನೆ. 2017ರಲ್ಲಿ ಕುಟುಂಬದವ್ರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದ ಜೋಡಿಗಳ ಮಧ್ಯೆ ಬಿರುಗಾಳಿ ಎದ್ದಿದ್ದು, ಕಳೆದ ಜುಲೈನಲ್ಲಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ.. ಆದ್ರೆ ನಿನ್ನೆ ಧ್ರುವ ಪತ್ನಿ ಶೃತಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ರಾಜೇಶ್ ಧ್ರುವನ ವಿರುದ್ಧ ಪರದಕ್ಷಿಣೆ ಕಿರುಕುಳದ ಕೇಸ್ ರಿಜಿಸ್ಟರ್ ಮಾಡಿದ್ದಾರೆ..

ಶೃತಿ ಕೇಸ್ ಫೈಲ್ ಮಾಡ್ತಿದ್ದಂಗೆ ರಾಜೇಶ್ ಧ್ರುವ ಕೆಂಡ ಮಂಡಲವಾಗಿದ್ದಾರೆ. ತಮ್ಮ ಮೊಬೈಲ್ ನಲ್ಲಿ 2015ರಲ್ಲಿ ರೆಕಾರ್ಡ್ ಮಾಡಿದ್ದ ಶೃತಿ ಡ್ರಿಂಕ್ಸ್ ಮಾಡುತ್ತಿದ್ದ ವಿಡಿಯೋವನ್ನ ವಾಹಿನಿಗಳ ಮುಂದೆ ತಂದಿಟ್ಟು, ನನ್ನ ಹೆಂಡತಿ ಕುಡಿಯುತ್ತಾಳೆ, ನಾನ್ ವೆಜ್ ತಿನ್ನುತ್ತಾಳೆ ಅಂತ ಪ್ರೂಫ್ ನೀಡಿದ್ದಾರೆ. ಆದ್ರೆ ಶೃತಿ ನನಗೆ ಡ್ರಿಂಕ್ಸ್ ತಂದುಕೊಟ್ಟಿದ್ದೇ ರಾಜೇಶ್, ಇದು ತಮಾಷೆಗೆ ಮಾಡಿದ ವಿಡಿಯೋ ಅಂತಿದ್ದಾರೆ..

ರಾಜೇಶ್ ಧ್ರುವಗೆ ಬೇರೆ ಹುಡುಗಿಯ ಜೊತೆ ಸಂಬಂಧ ಇದೆ. ಹೀಗಾಗಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ನನ್ನಿಂದ ದೂರವಾಗ್ತಿದ್ದಾರೆ, ಜೊತೆಗೆ ಈ ಹಿಂದೆ ಮೂರುವರೆ ತಿಂಗಳು ಗರ್ಭಿಣಿ ಆಗಿದ್ದಾಗ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಅಂತ ರಾಜೇಶ್ ಧ್ರುವ ಪತ್ನಿ ಶೃತಿ ಆರೋಪಿಸ್ತಿದ್ದಾರೆ.

ನನಗೆ ವಿಚ್ಚೇದನ ಬೇಕಾಗಿಲ್ಲ. ಇದು ನನ್ನ ಬದುಕಿನ ಪ್ರಶ್ನೆ. ಸಿಲ್ಲಿ ಕಾರಣ ಕೊಟ್ಟು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಇದಕ್ಕೆ ನಾನು ರೆಡಿ ಇಲ್ಲ ಅಂತ ಶೃತಿ ಹೇಳಿದ್ರೆ, ಈಕೆ ನನಗೆ ಬೇಡವೇ ಬೇಡ ಅಂತಿದ್ದಾರೆ ರಾಜೇಶ್ ಧ್ರುವ. ಒಟ್ನಲ್ಲಿ ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋ ಗಾದೆಯನ್ನ ರಾಜೇಶ್ ಹಾಗೂ ಶೃತಿ ಸುಳ್ಳು ಮಾಡಿದ್ದಾರೆ.

- Call for authors -

LEAVE A REPLY

Please enter your comment!
Please enter your name here