ಪೊಲೀಸರ ಸಮ್ಮುಖದಲ್ಲೇ ಪರಾಜಿತ ಅಭ್ಯರ್ಥಿ ಕಪಾಳಕ್ಕೆ ಹೊಡೆದ ಪಾಲಿಕೆ ಸದಸ್ಯ

0
1

ದಾವಣಗೆರೆ: ಪಾಲಿಕೆ ಸದಸ್ಯನ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಹಲ್ಲೆ‌ಮಾಡಿದವರಿಗೆ ಪೊಲೀಸ್ ಠಾಣೆಯಲ್ಲಿ ಕಪಾಳಕ್ಕೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಹೊಡೆದಿದ್ದಾರೆ. ‌ನಗರದ ಬಸವ ನಗರ ಪೊಲೀಸ್ ಠಾಣೆಯಲ್ಲಿ‌ ನೂರಾರು ಜನ ಸೇರಿದ್ದ ವಿಡಿಯೋ ವೈರಲ್ ಆಗಿದೆ.

ಕಾಯಿಪೇಟೆಯ ಬಿಜೆಪಿ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ ಮೇಲೆ ಪರಾಜಿತ ಪಕ್ಷೇತರ ಅಭ್ಯರ್ಥಿ ಹಲ್ಲೆ ಮಾಡಿದ್ದ. ಹಲ್ಲೆಯ ವಿಚಾರ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆಗೆ ನೂರಾರು‌ ಜನ ಬಿಜೆಪಿ ಕಾರ್ಯಕರ್ತರು ನುಗ್ಗಿದ್ದರು. ಪೊಲೀಸರ ಸಮ್ಮಖದಲ್ಲಿ ಪಾಲಿಕೆ ಸದಸ್ಯ ನ ಹಲ್ಲೆ ಮಾಡಿದ್ದ ಪರಾಜಿತ ಅಭ್ಯರ್ಥಿ ಮಂಜುನ ಸ್ನೇಹಿತ ಗುಬ್ಬಿ ಮಂಜುನ ಕಪಾಳಕ್ಕೆ ಯಶವಂತರಾವ್ ಜಾಧವ್ ಹೊಡೆದಿದ್ದಾರೆ.

ಈ ಸಂಬಂಧ ಎರಡು‌ ಕಡೆಯಿಂದ ದೂರು ದಾಖಲು ಮಾಡಲಾಗಿದೆ. ಪಾಲಿಕೆ ಸದಸ್ಯನ ಮೇಲೆ ಹಲ್ಲೆ ಪ್ರಕರಣ ಸಿಸಿ ಕ್ಯಾಮರಾದಲ್ಲಿ‌ ದಾಖಲಾಗಿತ್ತು. ಈ ಕುರಿತಂತೆ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.

- Call for authors -

LEAVE A REPLY

Please enter your comment!
Please enter your name here